Publish Date: Thu, 16 Feb 2023 (15:39 IST)
Updated Date: Thu, 16 Feb 2023 (15:44 IST)
ಮಂಡ್ಯದಲ್ಲಿ ನಡೆದ BJP ಕಾರ್ಯಕರ್ತರ ಸಭೆ ವೇಳೆ ಮಾತನಾಡಿದ್ದ ಸಚಿವ ಡಾ. ಅಶ್ವತ್ಥ್ ನಾರಾಯಣ, ಟಿಪ್ಪು ರೀತಿ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಹೊಡೆದು ಹಾಕಿ ಎಂದು ಕಾರ್ಯಕರ್ತರಿಗೆ ಹೇಳಿದ್ರು. ಈ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಆಕ್ರೋಶ ಹೊರಹಾಕಿದ್ದಾರೆ. ಸಚಿವ ಅಶ್ವತ್ಥ್ ನಾರಾಯಣ್ ಅವರದ್ದು RSS ಸಂಸ್ಕೃತಿ, ಕಡಿ, ಹಿಡಿ, ಹೊಡಿ, ಬಡಿ, ಕೊಲೆ ಮಾಡುವ ಸಂಸ್ಕೃತಿ BJPಯದ್ದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, BJPಯವರು ಗೋಡ್ಸೆ ಮೂಲಕ ಗಾಂಧಿಯವರನ್ನು ಕೊಲ್ಲಿಸಿದ್ರು. ಟಿಪ್ಪು ರೀತಿಯಲ್ಲಿ ಸಿದ್ದರಾಮಯ್ಯ ಮುಗಿಸಿ ಅಂದ್ರೆ ಏನು ಅರ್ಥ? ಎಂದು ಸಿದ್ದು ಪ್ರಶ್ನಿಸಿ, ಆಕ್ರೋಶ ಹೊರಹಾಕಿದ್ರು.