Select Your Language

Notifications

webdunia
webdunia
webdunia
webdunia

ನಾನು ಎಲ್ಲಾ ಜಾತಿಯ ಬಡವರ ಪರ : ಸಿದ್ದರಾಮಯ್ಯ

ನಾನು ಎಲ್ಲಾ ಜಾತಿಯ ಬಡವರ ಪರ : ಸಿದ್ದರಾಮಯ್ಯ
ವಿಜಯನಗರ , ಸೋಮವಾರ, 6 ಫೆಬ್ರವರಿ 2023 (10:51 IST)
ವಿಜಯನಗರ :  ನಾನು ಎಲ್ಲಾ ಜಾತಿಯವರ ಬಡವರ ಪರವಾಗಿದ್ದೇನೆ ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಯಾತ್ರಿ ನಿವಾಸ ಉದ್ಘಾಟನೆ ನಂತರ ಮಾತನಾಡಿದ ಅವರು, ಮಠ ಮಾಡಿದ್ದು ಕೇವಲ ಕುರುಬರಿಗಲ್ಲ. ಎಲ್ಲಾ ಹಿಂದುಳಿತ, ಶೋಷಿತ ಸಮಾಜಗಳಿಗೂ ಮಠ ಮಾಡಿದೆವು.

ಟಿಪ್ಪು ಜಯಂತಿ, ಕನಕ ಜಯಂತಿ, ಎಲ್ಲಾ ಜಯಂತಿ ಮಾಡಿದ್ದು ನಾವು. ಕೆಂಗಲ್ ಹನುಮಂತಯ್ಯ ಅಲ್ಲಾ, ದೇವೇಗೌಡ ಅಲ್ಲ, ಯಡಿಯೂರಪ್ಪ ಅಲ್ಲ, ಕುಮಾರಸ್ವಾಮಿಯಲ್ಲ. ಎಲ್ಲಾ ಜಯಂತಿ ಮಾಡಿದ್ದು ನಾವು ಎಂದು ತಿಳಿಸಿದರು. 

ಅಕ್ಕಮಹಾದೇವಿ ಹೆಸರಲ್ಲಿ ವಿಜಯಪುರದಲ್ಲಿ ಅಕ್ಕಮಹದೇವಿ ಮಹಿಳಾ ವಿವಿ ಎಂದು ನಾಮಕರಣ ಮಾಡಿದೆವು. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಹೆಸರಿಟ್ಟಿದ್ದು ನಾನು. ಆದರೆ ಇತ್ತೀಚೆಗೆ ನನ್ನ ಬಿಟ್ಟು ಎಲ್ಲಾ ಜಯಂತಿ ಮಾಡ್ತಾ ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನಂದೀಶ್ ರೆಡ್ಡಿ ನೇಮಕ