Publish Date: Mon, 30 Dec 2019 (18:46 IST)
Updated Date: Mon, 30 Dec 2019 (18:48 IST)
ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸಂಸ್ಮರಣೆಯನ್ನು ಅಭಿಮಾನಿಗಳು ನೆರವೇರಿಸಿದರು.
ಮಂಡ್ಯದ ಪಾಂಡವಪುರದಲ್ಲಿ ವಿಷ್ಣುವರ್ಧನ್ ಅವರ 10 ನೇ ವರ್ಷದ ಪುಣ್ಯಸ್ಮರಣೆ ಆಚರಣೆ ಮಾಡಿದ್ದಾರೆ ವಿಷ್ಣು ಅಭಿಮಾನಿಗಳು.
ಪಾಂಡವಪುರ ಪಟ್ಟಣದಲ್ಲಿ ಅಖಿಲ ಕರ್ನಾಟಕ ಡಾ.ವಿಷ್ಣುವರ್ಧನ್ ಅವರ ಅಭಿಮಾನಿಗಳ ಬಳಗದಿಂದ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು.
ಬಳಗದ ಜಿಲ್ಲಾಧ್ಯಕ್ಷ ವಿಷ್ಣು ವಿಠಲ್ ಮಾತನಾಡಿ, ನಾಡಿನಾದ್ಯಂತ ವಿಷ್ಣುವರ್ಧನ್ ಅವರ 10ನೇ ಪುಣ್ಯ ಸ್ಮರಣೆ ಆಚರಿಸುತ್ತಿದ್ದು, ವಿಷ್ಣುವರ್ಧನ್ ಹೆಸರಿನಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಅವರ ಅಂತ್ಯಕ್ರಿಯೆ ನಡೆದಿತ್ತು. ಹೀಗಾಗಿ ಮೈಸೂರು ರೀತಿ ಬೆಂಗಳೂರಿನಲ್ಲೂ ಸ್ಮಾರಕ ನಿರ್ಮಿಸಬೇಕು ಎಂದು ಒತ್ತಾಯಿಸಿದರು.