Publish Date: Wed, 18 Sep 2019 (09:11 IST)
Updated Date: Wed, 18 Sep 2019 (09:15 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಮೂವರು ಸ್ಟಾರ್ ಗಳಿಗೆ ಇಂದು ಜನ್ಮದಿನದ ಸಂಭ್ರಮ. ಸಾಹಸಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಟಿ ಶ್ರುತಿಗೆ ಇಂದು ಜನ್ಮದಿನ.
ಅವರ ಪೈಕಿ ಸಾಹಸಸಿಂಹ ಇಂದು ನಮ್ಮೊಂದಿಗಿಲ್ಲ. ಹಾಗಿದ್ದರೂ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸವಿನೆನಪಿನಲ್ಲಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ವಿಷ್ಣು ಅಪ್ಪಟ ಅಭಿಮಾನಿ ಕಿಚ್ಚ ಸುದೀಪ್ ತಮ್ಮ ನೆಚ್ಚಿನ ದಾದನಿಗೆ ವಿಶೇಷವಾಗಿ ಸಂದೇಶ ಬರೆದು ಸ್ಮರಿಸಿಕೊಂಡಿದ್ದಾರೆ. ಈವತ್ತು ಚಿತ್ರರಂಗದಲ್ಲಿ ನೀವಿರಬೇಕಿತ್ತು. ನಿಮಗೆ ನಮ್ಮ ಅಗತ್ಯವಿತ್ತೋ ಗೊತ್ತಿಲ್ಲ. ಆದರೆ ನಮಗೆ ನಿಮ್ಮ ಅಗತ್ಯವಿತ್ತು ಅಣ್ಣಾ ಎಂದು ಕಿಚ್ಚ ಪ್ರೀತಿಯಿಂದ ಬರೆದುಕೊಂಡಿದ್ದಾರೆ.
ಇನ್ನು ರಿಯಲ್ ಸ್ಟಾರ್ ಉಪೇಂದ್ರ ಈ ಬಾರಿ ವಿಶೇಷವಾಗಿ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದು ತಮ್ಮನ್ನು ಭೇಟಿ ಮಾಡಲು ಬರುವ ಅಭಿಮಾನಿಗಳಿಗೆ ಕೇಕ್ ಬದಲು ಗಿಡ ತರಲು ಹೇಳಿದ್ದಾರೆ. ಮಧ್ಯರಾತ್ರಿಯಿಂದಲೇ ಉಪ್ಪಿ ಮನೆಗೆ ಆಗಮಿಸುತ್ತಿರುವ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭ ಹಾರೈಸುತ್ತಿದ್ದಾರೆ. ಬರ್ತ್ ಡೇ ನಿಮಿತ್ತ ಇಂದು ಉಪೇಂದ್ರರ ಎರಡು ಹೊಸ ಸಿನಿಮಾ ಬುದ್ಧಿವಂತ 2 ಮತ್ತು ಹೋಂ ಮಿನಿಸ್ಟರ್ ಮೋಷನ್ ಪೋಸ್ಟರ್ ಬಿಡುಗಡೆಯಾಗುತ್ತಿದೆ.