Select Your Language

Notifications

webdunia
webdunia
webdunia
webdunia

ಆಫ್ರಿಕನ್ ಮಹಿಳೆಯರ ಗುಂಡಾವರ್ತನೆ

Violence against African women
bangalore , ಮಂಗಳವಾರ, 25 ಜುಲೈ 2023 (15:25 IST)
ಸಿಲಿಕಾನ್ ಸಿಟಿಯಲ್ಲಿ ಆಫ್ರಿಕನ್ ಮಹಿಳೆಯರ ಹಾವಳಿ ದಿನೇದಿನೆ ಹೆಚ್ಚಾಗ್ತಿದೆ. ಇತ್ತೀಚೆಗೆ ಕುಡಿದು ನಡುರಸ್ತೆಯಲ್ಲೇ ನಶೆಯಲ್ಲಿ ತೂರಾಡ್ತಿರೋ ಆಫ್ರೀಕನ್ ಮಹಿಳೆಯರು ಸಾರ್ವಜನಿಕರಿಗೆ ಕಿರುಕುಳ ನೀಡ್ತಿರೋದು ಎಲ್ಲೆಡೆ ವೈರಲ್ ಆಗಿದೆ. ಅದರಂತೆ ಇಂದೂ ಕೂಡ ಎಂ.ಜಿ ರಸ್ತೆಯ ಕಾವೇರಿ ಎಂಪೋರಿಯಂ ಸರ್ಕಲ್‌ನಲ್ಲಿ ನಶೆಯಲ್ಲಿದ್ದ ಆಫ್ರಿಕನ್ ಮಹಿಳೆಯರು, ಸಾರ್ವಜನಿಕರ ಮೇಲೆ ಕಲ್ಲುತೂರಿ ಹಲ್ಲೆಗೆ ಮುಂದಾಗಿದ್ದಾರೆ. ಕೈಯಲ್ಲಿ ಕಲ್ಲು ಹಿಡಿದು ಸಿಕ್ಕ ಸಿಕ್ಕವರನ್ನ ಅಟ್ಟಾಡಿಸಿದ್ದಾರೆ. ಕೂಡಲ್ ಸ್ಥಳೀಯರು ಹೊಯ್ಸಳ ಪೊಲೀಸರಿಗೆ ಕರೆ ಮಾಡಿದ್ದಾರೆ, ಆದ್ರೆ ಪೊಲೀಸರು ಬಂದ್ರೂ ಸಹ ಕೇರ್ ಮಾಡದ ಮಹಿಳೆಯರು ಪೊಲೀಸರ ಮುಂದಯೂ ಅಸಭ್ಯವಾಗಿ ವರ್ತಿಸಿದ್ದಾರೆ. ಸದ್ಯ ಎಣ್ಣೆ, ಡ್ರಗ್ಸ್ ನಶೆಯಲ್ಲಿ ಆಫ್ರೀಕನ್ ಮಹಿಳೆಯರು ತೋರುತ್ತಿರುವ ವರ್ತನೆಗೆ ಸಾರ್ವಜನಿಕರು ಹೈರಾಣಾಗಿದ್ದು, ಮಹಿಳೆಯರ ದುಂಡಾವರ್ತನೆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೃಹಲಕ್ಷ್ಮೀ ಅರ್ಜಿ ಸಲ್ಲಿಕೆಯಲ್ಲಿ ಮುಗಿಯದ ವಿಘ್ನ