Select Your Language

Notifications

webdunia
webdunia
webdunia
webdunia

ಹೆಣ್ಣು ಮಗು ಜನಿಸಿತೆಂದು ಹೀಗೆ ಮಾಡೋದಾ : ಹೆಣ್ಣು ಭ್ರೂಣ ಹತ್ಯೆಗೈದು ರಸ್ತೆ ಬದಿಯಲ್ಲಿ ಎಸೆದ್ರು !

ಹೆಣ್ಣು ಮಗು ಜನಿಸಿತೆಂದು ಹೀಗೆ ಮಾಡೋದಾ : ಹೆಣ್ಣು ಭ್ರೂಣ ಹತ್ಯೆಗೈದು ರಸ್ತೆ ಬದಿಯಲ್ಲಿ ಎಸೆದ್ರು !
ಬೀದರ್ , ಮಂಗಳವಾರ, 25 ಜುಲೈ 2023 (10:16 IST)
ಬೀದರ್ : ಭ್ರೂಣ ಹತ್ಯೆ ಮಾಡಿ ರಸ್ತೆ ಬದಿಯಲ್ಲಿ ಎಸೆದ ಹೃದಯ ವಿದ್ರಾವಕ ಘಟನೆ ಬೀದರ್ ಜಿಲ್ಲೆಯ ಹುಲಸೂರು  ತಾಲೂಕಿನ ಗುತ್ತಿ ಗ್ರಾಮದಲ್ಲಿ ನಡೆದಿದೆ.

ಭ್ರೂಣ ಹತ್ಯೆ ಮಾಡಿ ಗುತ್ತಿ ಗ್ರಾಮದ ರಸ್ತೆ ಬದಿಯಲ್ಲಿ ಅದನ್ನು ಬಿಸಾಡಿದ್ದು, ತಾಯಿಯ ಹೊಟ್ಟೆಯಲ್ಲಿದ್ದ ಮಗುವಿಗೆ ಕೇವಲ 4 ತಿಂಗಳು ಆಗಿರಬಹುದು ಎಂದು ಊಹಿಸಲಾಗಿದೆ. ಅಲ್ಲದೇ ಈ ಭ್ರೂಣ ಹೆಣ್ಣು ಮಗು ಎಂದು ಹೇಳಲಾಗುತ್ತಿದ್ದು, ಕೂಡಲೇ ಅದನ್ನು ಹುಲಸೂರು ನಗರದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ವಿಷಯ ತಿಳಿದ ಕೂಡಲೇ ಹುಲಸೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ : ಸುಪ್ರೀಂ