Select Your Language

Notifications

webdunia
webdunia
webdunia
webdunia

ಕಿಡ್ನಾಪ್ ಮಾಡಿ ಪೆಟ್ರೋಲ್ ಸುರಿದು ಯುವಕನ ಹತ್ಯೆಗೆ ಯತ್ನ

Kidnapping and attempt to kill a young man by pouring petrol on him
bangalore , ಮಂಗಳವಾರ, 18 ಜುಲೈ 2023 (15:14 IST)
ಆರ್ ಆರ್ ನಗರದಲ್ಲಿ ಬಸ್ ಗಾಗಿ ಕಾಯುತ್ತಿದ್ದ ವೇಳೆ  ಇನ್ನೋವಾ ಕಾರಿನಲ್ಲಿ ಬಂದಿದ್ದ ಆರೋಪಿಗಳು ಕಿಡ್ಬ್ಯಾಪ್ ಮಾಡಿದ್ದರು.. ನಂತರ ಕುಂಬಳಗೋಡು ಬಳಿ ಇರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಪೆಟ್ರೋಲ್ ಹಾಕಿ ಸುಟ್ಟಿದ್ದರು. ಅದಹಾಗೆ ಈತನನ್ನ ಕಿಡ್ಬ್ಯಾಪ್ ಮಾಡಿ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದು ಬೇರ್ಯಾರು ಅಲ್ಲ. ತನ್ನ ಸಂಬಂಧಿ ತಾನು ಪ್ರೀತಿಸಿದ ಹುಡುಗೀಯ ದೊಡ್ಡಪ್ಪ ಮನು @ಮಹೇಶ್.ಇದೆಲ್ಲದಕ್ಕೂ ಕಾರಣ ಇವರ ಸಂಬಂಧಿ ಲಹರಿ.. ದೂರದ ಸಂಬಂಧಿಯಾದ ಲಹರಿ ಎಂಬಾಕೆಯನ್ನ ಶಶಾಂಕ್ ಪ್ರೀತಿ ಮಾಡ್ತಿದ್ದ..  ಒಂದಷ್ಟು ದಿನ ಗೌಪ್ಯವಾಗಿದ್ದ ಇಬ್ಬರ ಸಂಬಂಧ ಕಳೆದ ಹನ್ನೊಂದನೇ ತಾರೀಖು ಮನೆಯವರಿಗೆ ತಿಳಿದಿತ್ತು.

ಇವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದ ಯುವತಿಯ ಪೋಷಕರು. ಅವತ್ತೇ ಶಶಾಂಕ್ ತಂದೆ ರಂಗನಾಥ್ ಮನೆಗೆ ಬಂದು ಜಗಳ ಮಾಡಿದ್ರು..ಶಶಾಂಕ್ ಗೆ ಹಲ್ಲೆ ಮಾಡಿ ಬುದ್ದಿ ಹೇಳಿ ಹೋಗಿದ್ರು. ಅಲ್ಲಿಗೆ ಎಲ್ಲಾ ಸರಿ ಹೋಗಿತ್ತು ಎಂದುಕೊಂಡಿದ್ರು.. ಆದ್ರೆ ಯಾವಾಗ ಲಹರಿ ಮನೆ ಬಿಟ್ಟು ಬಂದಳೋ ಅಲ್ಲಿ ಮತ್ತೆ ಕಿರಿಕ್ ಶುರುವಾಗಿತ್ತು. ಮನೆಗ ಬಂದವಳನ್ನ ಶಶಾಂಕ್ ಹಾಗು ಆತನ ಕುಟುಂಬಸ್ಥರು  ಇಲ್ಲಿರೋದು ಬೇಡ ತೊಂದರೆ ಆಗುತ್ತೆ ಎಂದು ಯುವತಿಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಇದರಿಂದ ಮತ್ತೆ ಖುದ್ದು ಹೋದ ಯುವತಿಯ ಕುಟುಂಬದವರು ಶಶಾಂಕ್ ಕಾಲೇಜಿಗೆ ಹೋಗುವಾಗ ಕಿಡ್ನ್ಯಾಪ್ ಮಾಡಿ ಪೆಟ್ರೋಲ್ ಹಚ್ಚಿ ಬಿಟ್ಟಿದ್ದರು. ಇನ್ನು ಶಶಾಂಕ್ ಮೈ ಬೆಂಕಿಯಲ್ಲಿ ಸುಡುತ್ತಿದ್ದರೂ ಮೊಬೈಲ್ ತೆಗೆದು ವಿಡೀಯೋ ಕಾಲ್ ಮಾಡಿ ಲೊಕೇಷನ್ ತಿಳಿಸಿದ್ದ‌ ಹಾಗು ತನ್ನ ಮೈಗೆ ಅಂಟಿದ ಬೆಂಕಿ ಆರಿಸಲು ಮಣ್ಣು ಗಳನ್ನ ಮೈಮೇಲೆ ಹರಡಿಕೊಂಡು ಒದ್ದಾಡಿದನಂತೆ.ಸದ್ಯ ಶಶಾಂಕ್ ದೇಹ  ಶೇಖಡ 85ರಷ್ಟು ಸುಟ್ಟುಹೋಗಿದೆ . ಆತನನ್ನ ವಿಕ್ಟೋರಿಯಾ ಬರ್ನಿಂಗ್ ವಾರ್ಡ್ ಗೆ ಸೇರಿಸಲಾಗಿದೆ . ಕಿಡ್ನ್ಯಾಪ್ ಆರ್ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಗಿದ್ದರೂ ಕೃತ್ಯ ಕುಂಬಳಗೋಡು ಲಿಮಿಟ್ಸ್ ನಲ್ಲಿ ಆಗಿದೆ. ಈ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ನಡೀತಿದೆ.. ಏನೆ ಹೇಳಿ ಸೋದರ ಸಂಬಂಧಿಗಳೇ ತಮ್ಮ ಮನೆ ಹುಡುಗನ್ನ ಈ ರೀತಿ ಮಾಡಿರೋದು ದುರಂತವೇ ಸರಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೈಕೋರ್ಟ್ ಆದೇಶವನ್ನು ಗಾಳಿಗೆ ತೂರಿದ ಕಾಂಗ್ರೆಸ್ ಪಕ್ಷ