ಬಣಗಳಿಂದ ಆಹ್ವಾನ ಬಂದಿಲ್ವಾ ಎಂಬ ಪ್ರಶ್ನೆಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು,ನನ್ನ ಯಾಕೆ ಸಂಪರ್ಕ ಮಾಡಬೇಕು..?ಎರಡು ಪಕ್ಷಗಳ ವಿರುದ್ದ ಸಮಾನವಾಗಿ ಹೋರಾಟ ಮಾಡಿದ್ದೇವೆ.ರಾಜ್ಯದಲ್ಲಿ ಬಿಜೆಪಿ,ಜೆಡಿಎಸ್ ಹೊಂದಾಣಿಕೆ ಆಗೋಗಿದ್ಯಾ..?ನಾನೇನು ಅರ್ಜಿ ಹಾಕಿಕೊಂಡು ಹೋಗಿದ್ದೀನಾ..?ಆದ್ರೆ ಮುಂದಿನ ದಿನಗಳಲ್ಲಿ ಇಂತಹ ಭ್ರಷ್ಟ ಸರ್ಕಾರ ತೆಗೆಯಲು ಚಿಂತನೆ ನಡೆಸಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕುಮಾರಸ್ವಾಮಿ ಸಿದ್ದಾಂತದ ಬಗ್ಗೆ ಸಿಎಂ ಸಿದ್ದರಾಮಯ್ಯ ಟೀಕೆ ವಿಚಾರವಾಗಿಯೂ ಹೆಚ್ ಡಿಕೆ ತಿರುಗೇಟು ನೀಡಿದ್ದಾರೆ.ಅವರಿಗೆ ಯಾವ ಸಿದ್ದಾಂತವಿದೆ.ನಿತೀಶ್ ಕುಮಾರ್,ಅಬ್ದುಲ್ಲಾಗೆ ಯಾವ ಸಿದ್ದಾಂತವಿದೆ.ಯಾವಾಗ ಕಾಂಗ್ರೆಸ್ ಜೊತೆ ಇದ್ರು,ಬಿಜೆಪಿ ಜೊತೆಗೆ ಯಾವಾಗಾ ಸರ್ಕಾರ ಮಾಡಿದ್ರು.ಎಲ್ಲವೂ ಉದಾಹರಣೆಗಳಿವೆ.ಎಷ್ಟು ಪ್ರಕರಣಗಳಿದೆ.ಜೆಡಿಎಸ್‌ಗೆ ಮಾತ್ರ ಸಿದ್ದಾಂತವಿಲ್ಲ.ಇವರಿಗೆ ಮಾತ್ರ ಸಿದ್ದಾಂತವಿದ್ಯಾ..?2008-2009 ರಲ್ಲಿ ಕಾಂಗ್ರೆಸ್ ಬಿಜೆಪಿ ಜೊತೆಗೆ ಮೈತ್ರಿಗೆ ಹೋಗಿದ್ದರು.ಮಲ್ಲಿಕಾರ್ಜುನ ಖರ್ಗೆ ವಿಪಕ್ಷನಾಯಕರಾಗಿದ್ದಾಗ ಮೈತ್ರಿಗೆ ಹೋಗಿರಲಿಲ್ವಾ?ಅವರನ್ನೆ ಕೇಳಿ,ಈ ಬೂಟಾಟಿಕೆಗಳು ಬೇಡ ಅಂತಾ ಹೆಚ್ ಡಿಕೆ ಟಾಂಗ್ ನೀಡಿದ್ದಾರೆ.