Select Your Language

Notifications

webdunia
webdunia
webdunia
webdunia

ಸಂಚಾರಿ ಪೊಲೀಸ್ ಅಧಿಕಾರಿ ಹೆಸರು ಹೇಳಿಕೊಂಡು ಸಂಚಾರಿ ನಿಯಮ ಉಲ್ಲಂಘನೆ

Violation of traffic rules
bangalore , ಭಾನುವಾರ, 12 ಸೆಪ್ಟಂಬರ್ 2021 (19:50 IST)
ಸಂಚಾರಿ ಪೊಲೀಸ್ ಅಧಿಕಾರಿ ಹೆಸರು ಹೇಳಿಕೊಂಡು ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡ್ತಾ ಇದ್ದ ವ್ಯಕ್ತಿಗೆ ಜಯನಗರ ಪೊಲೀಸರು ಬರೋಬ್ಬರಿ 20 ಸಾವಿರ ದಂಡ ವಿಧಿಸಿದ್ದಾರೆ.ಜಂಟಿ ಪೊಲೀಸ್ ಆಯುಕ್ತ ರವಿಕಾಂತೆ ಗೌಡ ಅವರ ಅಭಿಮಾನಿ ಹಾಗು ಆರ್.ಟಿ.ಓ.ಕಾರ್ಯಕರ್ತ ಎಂದು ಹೇಳಿಕೊಂಡು ಗಿರೀಶ್ ಬಾಬು ಎಂಬಾತ 42 ಬಾರಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದ.ಅಲ್ಲದೇ ಗಾಡಿಯಲ್ಲಿ ಪ್ರೇಸ್ ಎಂದು ಬರೆದುಕೊಂಡು ಸಂಚಾರಿ ನಿಯಮನ್ನ ಉಲ್ಲಂಘನೆ ಮಾಡ್ತಾ ಇದ್ದ. ಕೊನೆಗು ಸಂಚಾರಿ ಪೊಲೀಸರ ಕೈಗೆ ಈತ ಸಿಕ್ಕಿಬಿದ್ದಿದ್ದಾನೆ. ಇನ್ನು ನಿಯಮ ಉಲ್ಲಂಘನೆ  ಮಾಡಿದ ಗಿರೀಶ್ ಬಾಬು ಗಾಡಿಯನ್ನು ವಶಕ್ಕೆ ಪಡೆದಿರೋ ಪೊಲೀಸರು  20 ಸಾವಿರದ 200 ರೂ ದಂಡವನ್ನು ವಿಧಿಸಿದ್ದಾರೆ.ಗಾಡಿಯನ್ನು ಸಿಜ್ಹ್ ಮಾಡಿರುವ ಪೊಲೀಸರು ಬಾಬುವನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜವರಾಯನ ಅಟ್ಟಹಾಸಕ್ಕೆ 7 ಮಂದಿ ಬಲಿ