Select Your Language

Notifications

webdunia
webdunia
webdunia
Sunday, 13 April 2025
webdunia

ಅಪ್ಘಾನಿಸ್ಥಾನ ವಶಕ್ಕೆ ಪಡೆದ ತಾಲಿಬಾನ್ ನಿಂದ ಒಂದೊಂದೇ ನಿರ್ಬಂಧ

The one-off restriction by the Taliban captured by Afghanistan
bangalore , ಭಾನುವಾರ, 12 ಸೆಪ್ಟಂಬರ್ 2021 (19:30 IST)
ಅಪ್ಘಾನಿಸ್ಥಾನ ವಶಕ್ಕೆ ಪಡೆದ ತಾಲಿಬಾನ್ ಒಂದೊಂದೇ ನಿರ್ಬಂಧ ಹೇರುತ್ತಿದೆ. ಸರ್ಕಾರ ರಚನೆ ಇನ್ನೂ ಆಗಲೇ ಇಲ್ಲ. ಅದಕ್ಕಿಂತ ಮುಂಚಿತವಾಗಿಯೇ ಖಾತೆ ಹಂಚಿಕೆ ಮಾಡಿಕೊಂಡ ತಾಲಿಬಾನಿಗಳು ಅಫ್ಘಾನ್ನಲ್ಲಿ ಮಹಿಳೆಯರ ಮೇಲೆ ನಿರ್ಬಂಧ ಹೇರುತ್ತಿದೆ. ಅಫ್ಘನ್ ನಲ್ಲಿ ಮಾತನಾಡಿದ  ಶಿಕ್ಷಣ ಸಚಿವ ಅಬ್ದುಲ್ ಬಾರ್ಕಿ ಹಕ್ಕಾನಿ,  ಪಿಜಿ ಮಾಡುವ ಮಹಿಳೆಯರು ಪದವಿಗಳೊನ್ನಗೊಂಡಂತೆ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಬಹುದು. ಆದ್ರೆ ಪುರುಷರಿರುವ ಕೋಣೆಗಳಲ್ಲಿ ಮಹಿಳಾ ವಿದ್ಯಾರ್ಥಿಗಳು ಕೂರುವಂತಿಲ್ಲ. ಪ್ರತ್ಯೇಕ ಕೊಣೆಗಳಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಪದವಿ ಮಾಡಬಹುದು.  ಆದ್ರೆ ವಿದ್ಯಾರ್ಥಿನಿಯರಿಗೆ ಇಸ್ಲಾಮಿಕ್  ಉಡುಗೆ ಕಡ್ಡಾಯಗೊಳಿಸಲಾಗಿದೆ ಎಂದರು.  ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಿಜಾಬ್ ಧರಿಸುವ ಅಗತ್ಯವಿದೆ ಎಂದು ಹೇಳಿದರು ಆದರೆ ಇದು ಕೇವಲ ಕಡ್ಡಾಯ ಶಿರಸ್ತ್ರಾಣವೋ ಅಥವಾ ಕಡ್ಡಾಯವಾಗಿ ಮುಖದ ಮೇಲೆ ಹೊದಿಕೆಯೋ ಎಂಬುದನ್ನು ಹಕ್ಕಾನಿ ವಿವರಿಸಿಲ್ಲ. “ನಾವು ಹುಡುಗರು ಮತ್ತು ಹುಡುಗಿಯರು ಒಟ್ಟಿಗೆ ಅಧ್ಯಯನ ಮಾಡಲು ಅನುಮತಿಸುವುದಿಲ್ಲ” ಎಂದು ಅವರು ಹೇಳಿದರು. ವಿಶ್ವವಿದ್ಯಾನಿಲಯಗಳಲ್ಲಿ  ವಿಷಯಗಳನ್ನು ಸಹ ಪರಿಶೀಲಿಸಲಾಗುವುದು ಎಂದ ಹಕ್ಕಾನಿ ಈ ಬಗ್ಗೆ ವಿವರಿಸಿಲ್ಲ. ಇಸ್ಲಾಂನ ಕಠಿಣ ವ್ಯಾಖ್ಯಾನಕ್ಕೆ ಬದ್ಧರಾಗಿದ್ದ ತಾಲಿಬಾನ್‌ಗಳು ತಮ್ಮ ಹಿಂದಿನ ಅಧಿಕಾರಾವಧಿಯಲ್ಲಿ ಸಂಗೀತ ಮತ್ತು ಕಲೆಯನ್ನು ನಿಷೇಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ