Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಶಾಲಾ ಮಕ್ಕಳಿಗೆ ಹತ್ತು ದಿನ ದಸರಾ ರಜೆ

webdunia
ಶನಿವಾರ, 11 ಸೆಪ್ಟಂಬರ್ 2021 (21:18 IST)
ರಾಜ್ಯದ ಶಾಲಾ ಮಕ್ಕಳಿಗೆ 2021 - 22ನೇ ಸಾಲಿನ ಶೈಕ್ಷಣಿಕ ವರ್ಷದ ದಸರಾ ರಜೆ ಹಾಗೂ ಬೇಸಿಗೆ ರಜೆಯನ್ನ ರಾಜ್ಯ ಶಿಕ್ಷಣ ಇಲಾಖೆ ಘೋಷಿಸಿ ಆದೇಶ ಹೊರಡಿಸಿದೆ.
 
ಅಕ್ಟೋಬರ್ 10ರಿಂದ ಈ ದಸರಾ ರಜೆ ಪ್ರಾರಂಭವಾಗಲಿದ್ದು, ಅಕ್ಟೋಬರ್ 20ರವರೆಗೆ ಇರಲಿದೆ. ಬರೋಬ್ಬರಿ 10 ದಿನಗಳ ದಸರಾ ರಜೆ ಘೋಷಿಸಲಾಗಿದೆ. ಈ ರಜೆ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆ, ಅನುದಾನ ರಹಿತ ಶಾಲೆಗಳಿಗೆ ಅನ್ವಯಿಸಲಿದೆ.
 
ಇನ್ನು ಇದೇ ಸಮಯದಲ್ಲಿ 2021 - 2022 ಶೈಕ್ಷಣಿಕ ವರ್ಷದ ಬೇಸಗಿಗೆ ರಜೆಯ ಬಗ್ಗೆಯೂ ಮಾಹಿತಿ ನೀಡಿದೆ. ಶಾಲಾ ಮಕ್ಕಳಿಗೆ 2022ರ ಮೇ1 ರಿಂದ ಮೇ28 ರವರೆಗೆ ಬೇಸಿಗೆ ರಜೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಅನ್ವಯಿಸಲಿದೆ.
 
2021- 22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಟ್ಟು ಮಕ್ಕಳಿಗೆ 66 ದಿನಗಳ ಕಾಲ ರಜೆಗಳನ್ನು ನೀಡಲಾಗಿದೆ. ಒಟ್ಟು 223 ದಿನಗಳು ಕಲಿಕಾ ಪ್ರಕ್ರಿಯೆಗೆ ಲಭ್ಯವಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಸೆ. 15ರವರೆಗೆ ಕರಾವಳಿ ಹೊರತು ಪಡಿಸಿ, ಬೇರೆ ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ತೀರಾ ಕಡಿಮೆ