Select Your Language

Notifications

webdunia
webdunia
webdunia
Sunday, 6 April 2025
webdunia

ಜವರಾಯನ ಅಟ್ಟಹಾಸಕ್ಕೆ 7 ಮಂದಿ ಬಲಿ

7 people sacrificed to Javarayan's atlas
bangalore , ಭಾನುವಾರ, 12 ಸೆಪ್ಟಂಬರ್ 2021 (19:46 IST)
ವಿಕೆಂಡ್ ಮೂಡ್ ನಲ್ಲಿ ಜಾಲಿ ರೈಡ್ ಹೊದವರು ಮೊನ್ನೆ ಮೋನ್ನೆ ತಾನೆ ಜವರಾಯನ ಅಟ್ಟಹಾಸಕ್ಕೆ 7 ಮಂದಿ ಬಲಿಯಾಗಿದ್ರು.ಈ ಘಟನೆ ಸಿಲಿಕಾನ್ ಸಿಟಿಯ ಜನರ ಮನಸ್ಸಿನಿಂದ ಮರೆಯಾಗುವ ಮುನ್ನವೆ ಶ್ರೀಮಂತರ ಮಕ್ಕಳ ಮತ್ತೊಂದು ಜಾಲಿ ರೈಡ್ ಪ್ರಕರಣ ಬೆಳಕಿಗೆ ಬಂದಿದೆ.ವಿಕೆಂಡ್ ಜಾಲಿಗಾಗಿ ಕಾರಿನಲ್ಲೆ ಪಾರ್ಟಿ ಮಾಡ್ಕೋಂಡು ಕಾರಿನ ಡೋರ್ ಗಳನ್ನ ಓಪನಲ್ಲಿಟ್ಟು  ಕುಣಿಯುತ್ತಾ ಏರಿಯಾ ಸುತ್ತಾಡಿದ್ದಾರೆ.ಹೀಗೆ ಜಾಲಿ ಮೂಡ್ ನಲ್ಲಿ ರಾತ್ರಿ ಕಳೆದ ಪುಂಡರಿಗೆ ಬೇಳಗಾಗೊದ್ರೋಳಗೆ ಸದಾಶಿವ ನಗರ ಪೊಲೀಸರು ಶಾಕ್ ನೀಡಿದ್ದಾರೆ...ಮೊನ್ನೆ ಮೊನ್ನೆ ತಾನೇ ವಿಕೆಂಡ್ ಟೈಮ್ ನಲ್ಲಿ ಜಾಲಿ  ರೈಡ್ ಹೊರಟ್ಟಿದ್ದ ಹೊಸೂರು ಶಾಸಕನ ಪುತ್ರ ಆತನ ಸ್ನೇಹಿತರು ಅಪಘಾತದಲ್ಲಿ ಶಿವನ ಪಾದ ಸೇರಿದ್ರು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೋರ್ವ ಶ್ರೀಮಂತನ ಪುತ್ರನ ಪುಂಡಾಟ ಜಗಜಾಹಿರಾಗಿದೆ. ಬೆನ್ಜ್ ಕಾರ್ ನಲ್ಲಿ ಸ್ನೇಹಿತರನ ತುಂಬ್ಕೊಂಡು ರಾತ್ರಿ ವೇಳೆ ಅತೀಯಾದ  ಸೌಂಡ್ ಹಾಕ್ಕೋಂಡು ಅಡ್ಡಾತ್ತಿದ್ದವರ ಹೈಷರಾಮಿ ಕಾರ್ ಸಿಜ್ಹ್ ಮಾಡಿ ರಾಷ್ಟೀಯ ವಿಪತ್ತು ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಅಪ್ಪ ವಿದೇಶದಲ್ಲಿ ಮಗ ಕರ್ನಾಟಕದಲ್ಲಿ..ಅಪ್ಪ ಮಾಡಿರೋ ಸಂಪಾದನೆಯಲ್ಲ ನಂದೆ ಅನ್ನೋ ಮಗ..ಯಾರದೊ ದುಡ್ಡು ಎಲ್ಲಮ್ಮನ ಜಾತ್ರೆ ಅಂದ್ಕೋಂಡು ವಿಕೆಂಡ್ ಬಂದ್ರೆ, ಪಬ್ಬು ಡಿಸ್ಕೊ ಅಂತಿದ್ದವನ್ನು, ಈ ಬಾರಿ ವಿಕೆಂಡ್ ಕಳೆಯೋಕೆ ಡಿಪ್ರೇಂಟ್ ಪ್ಲಾನ್ ಮಾಡಿದ್ದ....ಪ್ರೆಂಡ್ಸ್ ನ ಕರ್ಕೊಂಡು ಹೈಷರಾಮಿ ಕಾರಿನಲ್ಲಿ ಡಿಜೆ ಹಾಕ್ಕೊಂಡು ಏರಿಯಾ ರೌಂಡ್ ಹೊಡೆಯೋಣ ಅನ್ಕೊಂಡಿದ್ದ. ಅದು ಅನ್ಕೋಂಡ ಹಾಗೆ ಕೂಡ ಮಾಡಿದ್ದ. ಸದಾಶಿವನಗರದಲ್ಲಿ ರಾತ್ರಿ ಅಬ್ಬರದ ಸೌಂಡ್ ಹಾಕೋಂಡು ಆರ್ಟ್ ಪೇಶೆಂಟ್ ಗಳ ಎದೆ ಬಡಿತ ಹೆಚ್ಚಿಸ್ತಾ ಜಾಲಿ ಮೂಡ್ ನಲ್ಲಿ ದಿನ ಕಳೆದಿದ್ದ..ಆದ್ರೆ ಬೆಳಗ್ಗೆ ಎದ್ದವನಿಗೆ ಕಾದಿತ್ತು ಶಾಕ್.ಈ ಪುಂಡರ ಗುಂಪು ಜಾಲಿ ಮೂಡ್ ನಲ್ಲಿ ಅದ್ಯಾವ ರೀತಿ ಹುಚ್ಚಾಟ ಆಡಿದ್ರೋ ಅನ್ನೋದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿತ್ತು.ಹೈಷರಾಮಿ ಕಾರಿನ ಡೋರ್ ಮತ್ತು ಟಾಪ್ ರೋಫ್ ಓಪನ್ ಮಾಡ್ಕೋಂಡು ಕಿರುಚಾಡ್ತ ಏರಿಯಾ ರೌಂಡ್ ಹಾಕಿದ್ರು.ಕೊವೀಡ್ ಟಫ್ ರೂಲ್ಸ್ ಇದ್ರು ಕ್ಯಾರೆ ಅನ್ನದೇ ಪಾರ್ಟಿ ಮೂಡ್ ನಲ್ಲಿ ತೇಲಾಡ್ತಾ ಇದ್ರು...ಇದೇ ವಿಡಿಯೊ ಆಧಾರವಾಗಿಟ್ಕೊಂಡು ಕಾರ್ ಮಾಲೀಕ ಸಂಜೀತ್ ಶೆಟ್ಟಿ ಮನೆಗೆ ಪೊಲೀಸರು ಎಂಟ್ರಿಕೊಟ್ಟಿದ್ರು.ಏರಿಯಾದ ಸಿಸಿಟಿವಿ ಕಲೆಕ್ಟ್ ಮಾಡಿಕೊಂಡು ಈ ವಿಡಿಯೋದಲ್ಲಿ ಇರುವವರು ಯಾರು ಅಂತಾ ಪತ್ತೆ ಮಾಡಿದ್ರು..ರಾತ್ರಿ ಮಾಡಿದ ಎಕ್ಸಟ್ರಾರ್ಡ್ನರಿ ಪಾರ್ಟಿಯ ಗುಂಗಿನಲ್ಲಿದ ಸಂಜೀತ್ ಶೇಟ್ಟಿಯ ಪುತ್ರನನ್ನ ವಿಚಾರಿಸಿದ ಪೊಲೀಸರು ತಕ್ಷಣಕ್ಕೆ ಕಾರ್ ಅನ್ನ ಸಿಜ್ಹ್ ಮಾಡಿದ್ದಾರೆ.ಇನ್ನು ಇವರಿಂದ ಹೇಳಿಕೆ ಪಡೆದಿರೋ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಇನ್ನು ಈಪುಂಡರ ಜಾಲಿ ರೈಡ್ ಬೆಳಕಿಗೆ ಬರುತ್ತಿದ್ದಂತೆ ಪೊಲೀಸ್ ಆಯುಕ್ತರು ಅಧಿಕಾರಿಳಿಗೆ ಕಾರ್ ಪತ್ತೆ ಹಚ್ಚಿ ಕ್ರಮ ಕೈ ಗೊಳ್ಳುವಂತೆ ಸೂಚನೆ ನೀಡದ್ದಾರೆ.ಇದರಿಂದ ಅಲರ್ಟ ಆದ ಸದಾಶೀವ ನಗರ ಪೊಲೀಸರು ಕಾರ್ ಅನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಲ್ಲಿ ಮುಂದಾಗಿದ್ದಾರೆ. ಸಿಲಿಕಾನ್ ಸಿಟೀಯಲ್ಲಿ ಕೋರೋನಾ ನೈಟ್ ಕರ್ಪ್ಯೂ ಇದ್ರು ನಿಯಮ ಉಲ್ಲಂಘನೆ ಆರೋಪದಡಿಯಲ್ಲಿ ಇದೀಗ ಕಾರ್ ಅನ್ನು ಸಿಜ್ಹ್ ಮಾಡಿಲಾಗಿದ್ದು.  ರಾಷ್ಟೀಯ ವಿಪತ್ತು ಕಾಯ್ದೆಯಡಿ ಪ್ರಕರಣ ದಾಖಲಿಸಿ ದಂಡವನ್ನು ವಿಧಿಸಲು ಮುಂದಾಗಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಗಂಧದ ಮರ ನಾಪತ್ತೆ ಮಾಡಿದ ಚೋರರು ಜೈಲು ಪಾಲು