Select Your Language

Notifications

webdunia
webdunia
webdunia
webdunia

ವಿಜಯಪುರದಲ್ಲಿ ಜನರಿಗೆ ವಕ್ಫ್ ನೋಟಿಸ್ ಆತಂಕ: ಸಚಿವ ಎಂಬಿ ಪಾಟೀಲ್ ಗೆ ತೇಜಸ್ವಿ ಸೂರ್ಯ ತಪರಾಕಿ

Tejasvi Surya

Krishnaveni K

ಬೆಂಗಳೂರು , ಸೋಮವಾರ, 21 ಅಕ್ಟೋಬರ್ 2024 (09:48 IST)
ಬೆಂಗಳೂರು: ವಿಜಯಪುರದಲ್ಲಿ ವಕ್ಫ್ ಬೋರ್ಡ್ ಆಸ್ತಿ ನೋಟಿಸ್ ಬಗ್ಗೆ ಜನ ಆತಂಕಗೊಂಡಿದ್ದು ಸಚಿವ ಎಂಬಿ ಪಾಟೀಲ್ ವಿರುದ್ಧ ಬಿಜೆಪಿ ಎಂಪಿ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ.

ವಕ್ಫ್ ಆಸ್ತಿ ಎಂದು ನೋಟಿಸ್ ಬಂದರೆ ಆತಂಕ ಬೇಡ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದರು. ವಕ್ಫ್ ಬೋರ್ಡ್ ನಿಂದ ತಿಕೋಟಾ ಜಿಲ್ಲೆಯ ಕೆಲವು ಗ್ರಾಮಗಳಿಗೆ ಮಾತ್ರ ನೋಟಿಸ್ ಬಂದಿದೆ. ನೋಟಿಸ್ ಬಂದ ಮಾತ್ರಕ್ಕೆ ಆತಂಕ ಬೇಡ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದರು.

ಎಂಪಿ ಪಾಟೀಲ್ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಂಸದ ತೇಜಸ್ವಿ ಸೂರ್ಯ, ವಕ್ಫ್ ಬೋರ್ಡ್ ಅತಿಕ್ರಮಣ ಮತ್ತು ಉದ್ಧಟತನಕ್ಕೆ ಉದಾಹರಣೆ ಇದು. ವಕ್ಫ್ ಆಸ್ತಿ ನೋಟಿಸ್ ವಿಚಾರಕ್ಕೆ ಮಾನ್ಯ ಸಚಿವರಿಗೆ ತಿಕೋಟಾ ಜಿಲ್ಲೆಯ ಕೆಲವು ಗ್ರಾಮಗಳಿಗೆ ನೋಟಿಸ್ ಬಂದಿರುವುದು ಮಾತ್ರ ಗಮನಕ್ಕೆ ಬಂದಿದೆ. ಆದರೆ ಜಿಲ್ಲೆಯ 211 ಗ್ರಾಮ ಪಂಚಾಯಿತಿಗಳ ರೈತರು, ಸಾರ್ವಜನಿಕರ ಗೋಳು ಕೂಡಾ ಇದೇ ಆಗಿದೆ ಎಂದಿದ್ದಾರೆ.

ವಿಜಯಪುರದಲ್ಲಿ 10 ಸಾವಿರ ಎಕರೆ ತಮ್ಮದು ಎಂದು ವಕ್ಫ್ ಬೋರ್ಡ್ ಹೇಳುತ್ತಿದೆ. ಇದರ ಸರ್ವೇ ಮಾಡಲು ಸಚಿವ ಜಮೀರ್ ಅಹ್ಮದ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮೊನ್ನೆಯಷ್ಟೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಮಳೆಗೆ ಶಾಲಾ, ಕಾಲೇಜುಗಳಿಗೆ ರಜೆ: ವಿದ್ಯುತ್ ಅನಾಹುತವಾಗಿದ್ದಲ್ಲಿ ಸಹಾಯವಾಣಿ ತೆರೆದ ಬಿಬಿಎಂಪಿ