Select Your Language

Notifications

webdunia
webdunia
webdunia
webdunia

ತೇಜಸ್ವಿ ಸೂರ್ಯ ಬಿಜೆಪಿಯ 'ಡ್ರಗ್ಸ್ ಮೋರ್ಚಾ'ದ ಅಧ್ಯಕ್ಷನೇ: ಕಾಂಗ್ರೆಸ್ ಪ್ರಶ್ನೆ

MP Tejasvi Surya

Sampriya

, ಗುರುವಾರ, 25 ಜುಲೈ 2024 (15:39 IST)
Photo Courtesy X
ಬೆಂಗಳೂರು: ಬಿಜೆಪಿಯ ಡ್ರಗ್ ಪೆಡ್ಲರ್‌ಗಳಿಗೂ ತೇಜಸ್ವಿ ಸೂರ್ಯನಿಗೂ ಬಹಳ ನಿಕಟ ಸಂಪರ್ಕವಿರುವುದು ಸಾಬೀತಾಗುತ್ತಲೇ ಇದೆ ಎಂದು ಕಾಂಗ್ರೆಸ್ ಪೋಸ್ಟ್ ಮಾಡಿದೆ.

ಡ್ರಗ್ಸ್ ಪ್ರಕರಣದಲ್ಲಿ ಗುಜರಾತ್‌ನ ಸೂರತ್‌ ಮೂಲದ ವ್ಯಕ್ತಿಯೊಬ್ಬನ ಬಂಧನ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಪೋಸ್ಟ್‌ ಮಾಡಿ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೂ ಡ್ರಗ್‌ ಪೆಡ್ಲರ್‌ಗಳಿಗೂ ತುಂಬಾ ಹತ್ತಿರದ ಸಂಬಂಧವಿದೆಯೇ ಎಂದು ಪ್ರಶ್ನಿಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್, ಬಿಜೆಪಿಯ ಡ್ರಗ್ ಪೆಡ್ಲರ್ ಗಳಿಗೂ ತೇಜಸ್ವಿ ಸೂರ್ಯನಿಗೂ ಬಹಳ ನಿಕಟ ಸಂಪರ್ಕವಿರುವುದು ಸಾಬೀತಾಗುತ್ತಲೇ ಇದೆ.

ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಬಿದ್ದ ಬಿಜೆಪಿ ಯುವಮೋರ್ಚಾದ  ಪಮೇಲಾ ಗೋಸ್ವಾಮಿಯೂ ತೇಜಸ್ವಿ ಸೂರ್ಯನಿಗೆ ಆಪ್ತೆ,

ಗುಜರಾತಿನಲ್ಲಿ ಸಿಕ್ಕಿಬಿದ್ದ ಬಿಜೆಪಿಯ ವಿಕಾಸ್ ಕೂಡ ತೇಜಸ್ವಿ ಸೂರ್ಯನಿಗೆ ಆಪ್ತ.

ಗುಜರಾತಿನಲ್ಲಿ ಸಿಕ್ಕಿಬಿದ್ದ ಬಿಜೆಪಿಯ ವಿಕಾಸ್ ಕೂಡ ತೇಜಸ್ವಿ ಸೂರ್ಯನಿಗೆ ಆಪ್ತ.

ಅಂದಹಾಗೆ ತೇಜಸ್ವಿ ಸೂರ್ಯ  ಬಿಜೆಪಿಯ 'ಡ್ರಗ್ಸ್ ಮೋರ್ಚಾ' ಅಧ್ಯಕ್ಷರಾಗಿದ್ದಾರೆಯೇ!?

ಬಿಜೆಪಿ ಪಕ್ಷದಲ್ಲಿ ರೌಡಿ ಮೋರ್ಚಾ, ಡ್ರಗ್ಸ್ ಮೋರ್ಚಾಗಳು ಚಟುವಟಿಕೆಯಿಂದ ಕಾರ್ಯಾಚರಿಸುತ್ತಿವೆಯೇ?

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್ ನಲ್ಲಿ ನೀರಿನಲ್ಲಿ ತೇಲಿ ಹೋದ ವಾಹನಗಳು: ಮಳೆ ಅವ್ಯವಸ್ಥೆಯ ವೈರಲ್ ವಿಡಿಯೋ ಇಲ್ಲಿದೆ