Select Your Language

Notifications

webdunia
webdunia
webdunia
webdunia

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ, ಪ್ರಕರಣ ದಾಖಲು

Belgavi Bomb Threat, India Bomb Threat, Belgavi District,

Sampriya

ಬೆಳಗಾವಿ , ಭಾನುವಾರ, 20 ಅಕ್ಟೋಬರ್ 2024 (16:15 IST)
Photo Courtesy X
ಬೆಳಗಾವಿ: ಕಳೆದ ಹಲವು ದಿನಗಳಿಂದ ಖ್ಯಾತ ಶಾಲಾ ಕಾಲೇಜು ಸೇರಿದಂತೆ  ಹಲವು ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಬರುತ್ತಿರುವ ಬೆನ್ನಲ್ಲೇ ಇಂದು ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಭಾನುವಾರ ಬಾಂಬ್ ಬೆದರಿಕೆ ಬಂದಿದೆ.

ಬಾಂಬ್ ಇಟ್ಟು ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜ್ ಅವರ ಇ-ಮೇಲ್ ಗೆ ಚೆನ್ನೈಯಿಂದ ಅಪರಿಚತರಿಂದ ಬೆದರಿಕೆ ಪತ್ರದ ಮೇಲ್ ಬಂದಿದೆ. ಇದರಿಂದ ವಿಮಾನ ನಿಲ್ದಾಣದ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಬಾಂಬ್ ಭೀತಿ ಹಿನ್ನೆಲೆ ಕೂಡಲೇ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಯಿತು. ಶ್ವಾನದಳ, ಬಾಂಬ್ ನಿಷ್ಕ್ರೀಯ ದಳದಿಂದ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಬೆದರಿಕೆ ಪತ್ರದ ಬಗ್ಗೆ ಪ್ರಕರಣ ದಾಖಲಾಗಿದೆ.

ನಿನ್ನೆ ಚೆನ್ನೈನಿಂದ-ಬೆಳಗಾವಿಗೆ ಬರುವ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆಳಗಾವಿ ವಿಮಾನ ನಿಲ್ದಾಣ ಅಥಾರಿಟಿಗೆ ಇ-ಮೇಲ್ ಮೂಲಕ ಸಂದೇಶ ಬಂದಿತ್ತು. ಇದರಿಂದಾಗಿ ಬೆಳಗಾವಿಗೆ ಚನ್ನೈನಿಂದ ಬರುವ ವಿಮಾನ ಸಂಪರ್ಕ ಕಡಿತಗೊಳಿಸಲಾಗಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್‌ನ ಕುರ್ಚಿ ಗುದ್ದಾಟದಲ್ಲಿ ರೈತರು ಅನಾಥರಾಗಿದ್ದಾರೆ: ಆರ್‌ ಅಶೋಕ್