ಬೆಂಗಳೂರು: ಮಹಿಳೆಯ ನಿಂದನೆ ಹಾಗೂ ಹಲ್ಲೆ ಆರೋಪದಲ್ಲಿ ಜಗದೀಶ್ ಹಾಗೂ ರಂಜಿತ್ ಬಿಗ್ಬಾಸ್ ಮನೆಯಿಂದ ಹೊರಬರುತ್ತಿದ್ದ ಹಾಗೇ ಇದೀಗ ವೈಲ್ಡ್ಕಾರ್ಡ್ ಎಂಟ್ರಿಯಾಗಿದೆ.
ಸರಿಗಮಪ 15ನೇ ಆವೃತ್ತಿಯಲ್ಲಿ ಬೆಳಕಿಗೆ ಬಂದ ಪ್ರತಿಭೆ, ರನ್ನರ್ ಅಪ್ ಆಗಿರುವ ಹನುಮಂತು ಅವರು ಇದೀಗ ದೊಡ್ಮನೆಗೆ ಪ್ರವೇಶಿಸಿದ್ದಾರೆ. ಇದೀಗ ಮೂರನೇ ವಾರ ವೈಲ್ಡ್ ಕಾರ್ಡ್ ಆಗಿ ಬಂದ ಸ್ಪರ್ಧಿಯನ್ನೇ ಕ್ಯಾಪ್ಟನ್ ಎಂದು ಬಿಗ್ಬಾಸ್ ಘೋಷಣೆ ಮಾಡಿದ್ದು, ಮನೆಮಂದಿಗೆ ಶಾಕ್ ಆಗಿದೆ.
ತಮ್ಮ ಮುಗ್ಧ ನಡವಳಿಕೆ ಹಾಗೂ ಸರಳ ವ್ಯಕ್ತಿತ್ವದ ಮೂಲಕ ಕರ್ನಾಟಕದ ಮನೆ ಮಾತಾಗಿರುವ ಹನುಮಂತು ಇದೀಗ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದು ಅವರ ಅಭಿಮಾನಿಗಳಲ್ಲಿ ಖುಷಿ ಕೊಟ್ಟಿದೆ.
ಹಾಡುಗಳು ಜತೆಗೆ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿಯೂ ಕಾಣಿಸಿಕೊಂಡಿರುವ ಹನುಮಂತ ತಮ್ಮ ಗ್ರಾಮೀಣ ಭಾಷೆಯ ಮೂಲಕವೇ ಎಲ್ಲರನ್ನು ಸೆಳೆಯುತ್ತಾರೆ. ಇದೀಗ ಬಿಗ್ಬಾಸ್ ವೇದಿಕೆಗೆ ಬಂದಿರುವ ಹನುಮಂತ ಮನೆಯಲ್ಲಿ ಹೇಗೆ ಇರ್ತಾರೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.