Select Your Language

Notifications

webdunia
webdunia
webdunia
webdunia

ಮಾನಸ ನಿಮ್ಮನ್ನು ಯಾಕೆ ಹೊರಗೆ ಹಾಕಬಾರ್ದು: ಕಿಚ್ಚನ ಕ್ಲಾಸ್

BigBoss Season 11

Sampriya

ಬೆಂಗಳೂರು , ಶನಿವಾರ, 19 ಅಕ್ಟೋಬರ್ 2024 (17:18 IST)
Photo Courtesy X
ಬೆಂಗಳೂರು: ಮಹಿಳೆಯರಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ ಆರೋಪದಲ್ಲಿ ಜಗದೀಶ್ ಹಾಗೂ ಹಲ್ಲೆ ಮಾಡಿದ ಆರೋಪದಲ್ಲಿ ನಟ ರಂಜಿತ್ ಮನೆಯಿಂದ ಗಂಟು ಮೂಟೆ ಕಟ್ಟಿದ್ದಾರೆ. ಇದೀಗ ಈ ವಾರದ ಕಿಚ್ಚನ ಪಂಚಾಯಿತಿ ಭಾರೀ ಕುತೂಹಲವನ್ನು ಮೂಡಿಸಿದೆ.

ಈ ವಾರದಲ್ಲಿ ನಟ ಕಿಚ್ಚ ಸುದೀಪ ಅವರು ಯಾವ ರೀತಿ ಸ್ಪರ್ಧಿಗಳಿಗೆ ಕ್ಲಾಸ್‌ ತೆಗೆದುಕೊಳ್ಳುತ್ತಾರೆ ಎಂಬ ಮಾತಿದೆ.

ಇದೀಗ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಫ್ರೋಮೋದಲ್ಲಿ ಸುದೀಪ ಅವರು ಸ್ಪರ್ಧಿಗಳ ವಿರುದ್ಧ ಗರಂ ಆಗಿದ್ದಾರೆ.

ತಪ್ಪು ಮಾಡಿದವರು ಹೊರಗೆ ಹೋಗಾಯಿತು. ಹಾಗಾದ್ರೆ ಈ ಮನೆಯಲ್ಲಿ ಎಷ್ಟು ಜನ ಸರಿ ಇದ್ದೀರಿ ಎಂದು ಕೋಪದಲ್ಲಿ ಪ್ರಶ್ನೆ ಮಾಡಿದ್ದಾರೆ.

ಈ ಪ್ರೋಮೋದಲ್ಲಿ ಉಗ್ರಂ ಮಂಜು, ಮಾನಸ ಹಾಗೂ ಚೈತ್ರ ಕುಂದಾಪುರಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಬ್ಬರು ತಮ್ಮ ಮಾತಿನಿಂದ ಹೊರಹೋಗಿದ್ದಾರೆ ಎಂದಾದರೆ, ಮಾನಸ ಅವರು ಆಡಿದ ಕೆಲವು ತಪ್ಪು ಮಾತುಗಳಿವೆ. ಮತ್ತೇ ನಿಮ್ಮನ್ನು ಯಾಕೆ ಇನ್ನೂ ಬಿಗ್‌ಬಾಸ್ ಮನೆಯಲ್ಲಿ ಉಳಿಸಿಕೊಳ್ಳಬೇಕೆಂದು ಎಂದು ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ.

ಈ ಪ್ರೋಮೋ ನೋಡಿದ ಬಿಗ್‌ಬಾಸ್ ಪ್ರಿಯರು, ಇದು ಇದು Actually ಚೆನ್ನಾಗಿರೋ ಕಿಚ್ಚನ ಕ್ಲಾಸ್ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೇ ಕೆಲವರು ಸುದೀಪ್ ಅವರ ಕ್ಲಾಸ್ ಮಸ್ತ್ ಆಗಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೊಡ್ಮನೆಯಿಂದ ಹೊರಬರುತ್ತಿದ್ದ ಹಾಗೇ ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡ ಜಗದೀಶ್