Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮನೆ ಮೇಲೆ ದಾಳಿ, ಕ್ರೇನ್ ತಂದು ಎಲ್ಲವನ್ನೂ ಹೊತ್ತೊಯ್ದ ಆಗಂತುಕರು

ಬಿಗ್ ಬಾಸ್ ಮನೆ ಮೇಲೆ ದಾಳಿ, ಕ್ರೇನ್ ತಂದು ಎಲ್ಲವನ್ನೂ ಹೊತ್ತೊಯ್ದ ಆಗಂತುಕರು

Sampriya

ಬೆಂಗಳೂರು , ಶುಕ್ರವಾರ, 11 ಅಕ್ಟೋಬರ್ 2024 (16:52 IST)
Photo Courtesy X
ಬೆಂಗಳೂರು: ಸ್ವರ್ಗ ಮತ್ತು ನರಕ ಎಂಬ ವಿಭಿನ್ನ ಪರಿಕಲ್ಪನೆಯೊಂದಿಗೆ ಶುರುವಾದ ಬಿಗ್‌ಬಾಸ್‌ ಸೀಸನ್ 11ರ ಮನೆ ಮೇಲೆ ಮುಸುಕುದಾರಿಗಳು ದಿಢೀರ್ ದಾಳಿ ಮಾಡಿ, ನರಕ ನಿವಾಸಿಗಳ ಮನೆಯನ್ನು ಪುಡಿ ಪುಡಿ ಮಾಡಿದ್ದಾರೆ.

ಇದರಿಂದ ಮನೆಮಂದಿಯೆಲ್ಲ ಬೆಚ್ಚಿಬಿದ್ದಿದ್ದಾರೆ.  ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಒಮ್ಮೆಲೇ ಎಮರ್ಜೆನ್ಸಿ ಸದ್ದಿಗೆ ಮನೆಮಂದಿಯೆಲ್ಲ ಶಾಕ್ ಆಗಿದ್ದಾರೆ.

ದಿಢೀರನೆ ಹತ್ತರಷ್ಟು ಮುಸುಕುದಾರಿಗಳು ನರಕ ನಿವಾಸಿಗಳ ಮನೆ ಮೇಲೆ ದಾಳಿ ಮಾಡಿದ್ದಾರೆ.  ಏಕಾಏಕಿ ನರಕ ನಿವಾಸಿಗಳ ಮನೆಯನ್ನು ಕೆಡವಿದ್ದಾರೆ. ಕ್ರೇನ್ ಮೂಲಕ ನರಕ ನಿವಾಸಿಗಳ ವಸ್ತುಗಳನ್ನು ಹೊತ್ತೊಯ್ದಿದ್ದಾರೆ.

ಈ ಪ್ರೋಮೋ ನೋಡಿದ ಬಿಗ್‌ಬಾಸ್ ಪ್ರಿಯರು, ಇಂದಿಗೆ ಸ್ವರ್ಗ ಮತ್ತು ನರಕ ಪರಿಕಲ್ಪನೆ ಮುಗಿದಿದೆ. ಜಗದೀಶ್ ಅವರಿಂದ ನರಕವಾಸಿಗಳು ಗೆದ್ದರು ಎಂದು ಬರೆದಿದ್ದಾರೆ.

ಇನ್ನು ಬಿಗ್‌ಬಾಸ್‌ ಮನೆಯಲ್ಲಿ ನರಕ ನಿವಾಸಿಗಳಿಗೆ ಪ್ರಾಥಮಿಕ ಸವಲತ್ತುಗಳನ್ನು ನೀಡದೆ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗುತ್ತಿದೆ ಎಂಬುದಾಗಿ ಮಹಿಳಾ ಆಯೋಗಕ್ಕೆ ದೂರು ನೀಡಲಾಯಿತು.

ಇದರ ಬೆನ್ನಲ್ಲೇ ಇದೀಗ ಈ ಪರಿಕಲ್ಪನೆಗೆ ಅಂತ್ಯ ಹಾಡಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಯುಧಪೂಜೆಯಂದೇ ಗುಡ್‌ನ್ಯೂಸ್‌ ಕೊಟ್ಟ ಯುವ: ಹೊಸ ಚಿತ್ರದ ಪೋಸ್ಟರ್‌ ರಿಲೀಸ್‌