Select Your Language

Notifications

webdunia
webdunia
webdunia
webdunia

ಹಂಸಗೆ ಐ ಲವ್‌ ಯೂ ಹೇಳಿ, ಸಡನ್ ಆಗಿ ಲವರ್ ಬಾಯ್ ಆದ ಜಗದೀಶ್

BigBoss Season 11, BigBoss Contest Jagadish, Serial Actress Hamsa

Sampriya

ಬೆಂಗಳೂರು , ಮಂಗಳವಾರ, 8 ಅಕ್ಟೋಬರ್ 2024 (15:00 IST)
Photo Courtesy X
ಮೊನ್ನೆಯವರೆಗೂ ಹಂಸ ಜತೆ ಕಿತ್ತಾಡುತ್ತಿದ್ದ ಜಗದೀಶ್ ನರಕ ನಿವಾಸಿಯಾದ ಬಳಿಕ ಸಡನ್ ಆಗಿ ಬದಲಾಗಿದ್ದಾರೆ. ಸದ್ಯ ಮನೆಯ ಹೊಸ ಕ್ಯಾಪ್ಟನ್ ಆಗಿರುವ ಹಂಸ ಅವರ ಜತೆ ಜಗದೀಶ್ ಅವರು ಫ್ಲರ್ಟ್‌ ಮಾಡೋಕೆ ಶುರು ಮಾಡಿದ್ದಾರೆ.

ಇದನ್ನು ನೋಡಿ ಸಹಸ್ಪರ್ಧಿಗಳು ಎಂಜಾಯ್ ಮಾಡುತ್ತಿದ್ದಾರೆ. ಸ್ವರ್ಗ ನಿವಾಸಿಯಾಗಿದ್ದ ಜಗದೀಶ್ ಅವರು ನರಕ ಮನೆಗೆ ಸೇರಲು ಪ್ರಮುಖ ಕಾರಣ ಹಂಸ ಅವರು. ಇದೀಗ ಗೋಲ್ಡ್ ಸುರೇಶ್ ಜತೆ ಸೇರಿ ಲಾಯರಪ್ಪ ಹಂಸ ಅವರನ್ನು ಕಾಲೆಳೆಯುತ್ತಿದ್ದಾರೆ.

ಮನೆ ಕೆಲಸದ ವೇಳೆಯೂ ಹಂಸ ಅವರಲ್ಲಿ ನನಗೆ ಮೆಡಿಸಿನ್ ಈಗಲೇ ಬೇಕು, ಶ್ಯಾಂಪೂ ಬೇಕು, ಅಂಡರ್ ವೇರ್ ತಂದುಕೊಡಿ ಎಂದು ರಗಳೆ ಮಾಡುತ್ತಿದ್ದಾರೆ. ಅದಲ್ಲದೆ ನರಕ ನಿವಾಸಿಗಳಿಗೆ ಕಲುಷಿತ ನೀರು ಕೊಟ್ಟ ಅವರ ಆರೋಗ್ಯ ಹಾಳು ಮಾಡಿದ್ದೀರಿ ಎಂದು ಆರೋಪ ಮಾಡಿದ್ದಾರೆ.

ಇದೀಗ ಕಲರ್ಸ್ ಕನ್ನಡ ವಾಹಿನಿ ಇಂದು ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಮುಂಗಾರು ಮಳೆ ಸಿನಿಮಾದ ಹಾಗೇ ಜಗದೀಶ್ ಎದೆ ಮೇಲೆ  ಹಂಸ ಕಾಲಿಟ್ಟು ಜಿಗಿದಿದ್ದಾರೆ. ಇವತ್ತಿನ ಎಪಿಸೋಡ್ ವೀಕ್ಷಕರಿಗೆ ಮನರಂಜನೆ ನೀಡುತ್ತೆ ಅನ್ನೋದು ಖಾತರಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಹೇಳಿದ್ರೂ ಕೇಳ್ತಿಲ್ಲ, ದರ್ಶನ್ ರದ್ದು ಒಂದೇ ಹಠ