Select Your Language

Notifications

webdunia
webdunia
webdunia
webdunia

ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿದರೂ ದೊಡ್ಮನೆಯಲ್ಲಿ ನಗು ತಂದ ಉಗ್ರಂ ಮಂಜು

Ugram Manju

Sampriya

ಬೆಂಗಳೂರು , ಶನಿವಾರ, 5 ಅಕ್ಟೋಬರ್ 2024 (19:12 IST)
Photo Courtesy X
ಉಗ್ರಂ ಸಿನಿಮಾದ ಮೂಲಕ ಖ್ಯಾತಿ ಗಳಿಸಿದ ಮಂಜುನಾಥ್ ಗೌಡ ಅವರು ಇದೀಗ ಬಿಗ್‌ಬಾಸ್‌ ಮೂಲಕ ಕನ್ನಡಿಗ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿದರೂ ದೊಡ್ಮನೆಯಲ್ಲಿ ಮಾತ್ರ ತಮ್ಮ ಮಿಮಿಕ್ರಿ, ವಿಭಿನ್ನ ಹಾಡಿನ ಮೂಲಕ ಎಲ್ಲರ ಮುಖದಲ್ಲಿ ನಗು ತರುತ್ತಿದ್ದಾರೆ.

ಬಿಗ್‌ಬಾಸ್ ಶುರುವಿನಿಂದಲೂ ಜಗಳ ಆಡುವವರು ಹೆಚ್ಚಾಗಿದ್ದಾರೆ.  ಮನರಂಜನೆ ನೀಡುವವರು ಇಲ್ವೇ ಇಲ್ಲ ಎಂದು ಅನಿಸ್ತಾ ಇರುವಾಗ ಈ ಕೊರತೆಯನ್ನು ಉಗ್ರಂ ಮಂಜು ನೀಗಿಸುತ್ತಿದ್ದಾರೆ. ಬೇಕಾದಲ್ಲಿ ಕೌಂಟರ್ ನೀಡುತ್ತಾ, ಸಹ ಸ್ಪರ್ಧಿಗಳ ಜತೆ ತಮಾಷೆ ಮಾಡುತ್ತಾ, ಆಗಾಗ ತಮ್ಮ ವಿಭಿನ್ನ ಶೈಲಿಯ ಹಾಡಿನ ಮೂಲಕ ನಗಿಸುತ್ತಿದ್ದಾರೆ. ಇದು ಬಿಗ್‌ಬಾಸ್ ಪ್ರಿಯರಿಗೂ ಖುಷಿ ನೀಡುತ್ತಿದೆ.

ಇಂದಿನ ವಾರದ ಕಥೆ ಕಿಚ್ಚನ ಜತೆಯಲ್ಲಿ ಸುದೀಪ್ ಅವರು ಮಂಜು ಮುಂದೆ ಉಗ್ರಂ ತಾಂಡವ ಆಡುತ್ತಿರುವವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಕಿಚ್ಚನಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸುವ ಮೂಲಕ ಎಲ್ಲರ ಮುಖದಲ್ಲಿ ನಗು ತರಿಸಿದ್ದಾರೆ. ಒಟ್ಟು ಬಿಗ್‌ಬಾಸ್ ಸೀಸನ್ 11ರಲ್ಲಿ ಮಂಜು ಅವರು ಹೊಸ ಭರವಸೆಯನ್ನು ಮೂಡಿಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪನ ಆಣೆಗೂ ಈ ಶೋ ಹಾಳ್ ಮಾಡಕ್ಕೆ ಯಾರಿಂದನೂ ಸಾಧ್ಯವಿಲ್ಲ: ಜಗದೀಶ್‌ಗೆ ಕಿಚ್ಚ ಖಡಕ್ ವಾರ್ನಿಂಗ್