Select Your Language

Notifications

webdunia
webdunia
webdunia
Wednesday, 9 April 2025
webdunia

BigBoss Season 11: ಐಶ್ವರ್ಯ- ಭವ್ಯ ಗೌಡ ನಾಮಿನೇಷನ್‌ ಕಿಚ್ಚು

BigBoss Season 11, Nomianation Process, Bhavya- Aishwarya Fight

Sampriya

ಬೆಂಗಳೂರು , ಮಂಗಳವಾರ, 8 ಅಕ್ಟೋಬರ್ 2024 (16:22 IST)
Photo Courtesy X
ಬಿಗ್‌ಬಾಸ್ ಸೀಸನ್ 11ರ ಈ ವಾರದಲ್ಲಿ ನಡೆದ ಓಪನ್ ನಾಮಿನೇಷನ್‌ನಿಂದ ಇದೀಗ ದೊಡ್ಮನೆಯಲ್ಲಿ ವಾಕ್ಸಮರ ಜೋರಾಗಿದೆ.

ನಿನ್ನೆಯ ಎಪಿಸೋಡ್‌ನಲ್ಲಿ ಕ್ಯಾಪ್ಟನ್ ಹಂಸ ಅವರು ನರಕ ನಿವಾಸಿಯಾದ ಸುರೇಶ್ ಅವರನ್ನು ಡೈರೆಕ್ಟ್ ಆಗಿ ಮನೆಯಿಂದ ಹೊರಹೋಗಲು ನಾಮಿನೇಟ್ ಮಾಡಿದ್ದಾರೆ.

ಇನ್ನುಳಿದ ಸ್ಪರ್ಧಿಗಳನ್ನು ಇಬ್ಬಿಬ್ಬರನ್ನು ಆಯ್ಕೆ ಮಾಡಿ, ತಾವು ಮನೆಯಲ್ಲಿ ಉಳಿದುಕೊಳ್ಳಲು ಅವರಿಗಿಂತ ಯಾಕೆ ಸಮರ್ಥರು ಎಂದು ಪ್ರತಿಪಾದಿಸಬೇಕಿತ್ತು. ಅದರ ಅನುಸಾರ ಹಂಸ ಅವರು ಯಾರು ಮನೆಯಲ್ಲಿ ಉಳಿಯಲು ಅರ್ಹರೆಂದು ತಿಳಿದು ಮತ್ತೊಬ್ಬರ ಮುಖಕ್ಕೆ ಮಸಿ ಹಾಕಿ ನಾಮಿನೇಟ್ ಮಾಡಿದರು.

ನಿನ್ನೆ ತ್ರಿವಿಕ್ರಮ್, ಧನರಾಜ್, ಅನುಷಾ ರೈ ಅವರು ನಾಮಿನೇಟ್ ಆಗಿದ್ದಾರೆ. ಇನ್ನು ಉಳಿದ ಸ್ಪರ್ಧಿಗಳ ನಾಮಿನೇಷನ್ ಪ್ರಕ್ರಿಯೆ ಇಂದು ಮುಂದುವರೆಯಲಿದೆ.  ಇದೀಗ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ನಾಮಿನೇಶನ್ ವಿಚಾರವಾಗಿ ವಾಕ್ಸಮರ ಜೋರಾಗಿದೆ. ಅದರಲ್ಲಿ ಭವ್ಯ ಗೌಡ ಹಾಗೂ ಐಶ್ವರ್ಯ ನಡುವೆ ನಾಮಿನೇಷನ್ ಚರ್ಚೆ ಜೋರಾಗಿ ನಡೆದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ಶೂಟಿಂಗ್‌ ವೇಳೆ ನಟ ಇಮ್ರಾನ್ ಹಶ್ಮಿ ಕುತ್ತಿಗೆಗೆ ಗಾಯ