Publish Date: Sun, 31 Mar 2024 (10:48 IST)
Updated Date: Sun, 31 Mar 2024 (10:51 IST)
ಬೆಂಗಳೂರು: ಲೋಕಸಭೆ ಚುನಾವಣೆ ಕಾವೇರಿದ್ದು ಎಲ್ಲಾ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಮತಬೇಟೆ ಶುರು ಮಾಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಕೂಡಾ ಇಂದು ಬೆಳಿಗ್ಗೆಯೇ ಮತಯಾಚನೆ ಮಾಡಿದ್ದಾರೆ.
ಬೆಂಗಳೂರು ದಕ್ಷಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ. ಅವರಿಗೆ ಎದುರಾಳಿಯಾಗಿ ಕಾಂಗ್ರೆಸ್ ನಿಂದ ಸೌಮ್ಯ ರೆಡ್ಡಿ ಸ್ಪರ್ಧಿಸುತ್ತಿದ್ದಾರೆ. ಬೆಂಗಳೂರಿನ ಅತ್ಯಂತ ಅಭಿವೃದ್ಧಿ ಹೊಂದಿದ ಭಾಗವಾಗಿರುವ ದಕ್ಷಿಣ ಭಾಗದಲ್ಲಿ ತೇಜಸ್ವಿ ಮತ್ತೊಮ್ಮೆಸಂಸದರಾಗಿ ಆಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ.
ಇಂದು ಬೆಳಿಗ್ಗೆಯೇ ಅವರು ಬಿಟಿಎಂ ಲೇಔಟ್ ನ ಪಾರ್ಕ್ ಗಳಿಗೆ ತೆರಳಿ ಬೆಳಗಿನ ವಾಕಿಂಗ್ ಮಾಡುವವರೊಂದಿಗೆ ಬೆರೆತು ಮತ ಯಾಚನೆ ಮಾಡಿದ್ದಾರೆ. ಈ ವೇಳೆ ಮೋದಿ ಮತ್ತೊಮ್ಮೆ ಎಂಬ ಅವರ ಟಿ ಶರ್ಟ್ ಎಲ್ಲರ ಗಮನ ಸೆಳೆದಿದೆ. ಜೊತೆಗೆ ಸಂಸದರನ್ನು ಅನಿರೀಕ್ಷಿತವಾಗಿ ಕಂಡ ಜನ ಅವರ ಜೊತೆಗೊಂದು ಸೆಲ್ಫೀ ತೆಗೆದು ಸಂಭ್ರಮಿಸಿದ್ದಾರೆ.
ನಿನ್ನೆಯೂ ಅವರು ಪಾರ್ಕ್ ಗಳಿಗೆ ತೆರಳಿ ಮತಯಾಚನೆ ಮಾಡಿದ್ದರು. ಅಷ್ಟೇ ಅಲ್ಲದೆ, ಸ್ಥಳೀಯ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರೊಂದಿಗೆ ಸೇರಿಕೊಂಡು ತಾವೂ ಕ್ರಿಕೆಟ್ ಆಡಿ ಗಮನ ಸೆಳೆದಿದ್ದರು.