ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವೆಟರ್ನರಿ ಕಾಲೇಜಿನ ನೂರಾರು ವೈದ್ಯ ವಿದ್ಯಾರ್ಥಿಗಳು ಹೆಬ್ಬಾಳದ ವೆಟರ್ನರಿ ಕಾಲೇಜಿನ ಮುಂದೆ ಪ್ರತಿಭಟನೆ ಮಾಡ್ತಿದ್ದಾರೆ.ಕಾಲೇಜು ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆಗೆ ಕುಳಿತಿದ್ದಾರೆ.2015 ರಿಂದ ಸ್ಟೇಫಂಡ್ ಪರಿಷ್ಕರಣೆ ಮಾಡದ ಕಾರಣ ವಿದ್ಯಾರ್ಥಿಗಳು ಪ್ರತಿಭಟನೆ ಮಾಡ್ತಿದ್ದು,ಬೆಂಗಳೂರು, ಶಿವಮೊಗ್ಗ, ಬೀದರ್ ಹಾಸನ್, ಗದಗ ಸೇರಿದಂತೆ ರಾಜ್ಯದಾದ್ಯಂತ ವಿದ್ಯಾರ್ಥಿಗಳು ಹೋರಾಟ ಮಾಡುತ್ತಿದ್ದಾರೆ.2015 ರಿಂದ ಹಲವು ಬಾರಿ ಮನವಿ ಮಾಡಿದ್ರು ಸರ್ಕಾರ ಸ್ಟೈಫಂಡ್ ಪರಿಷ್ಕರಣೆ ಮಾಡಿಲ್ಲ.ಒಂದು ವರ್ಷಕ್ಕೆ ಕೇವಲ 14 ಸಾವಿರ ರೂ ಸ್ಟೈಫಂಡ್ ಮಾತ್ರ ನೀಡುತ್ತಿದ್ದಾರೆ.ಬೇರೆ ಬೇರೆ ಗ್ರಾಮಾಂತರ ಪ್ರದೇಶಗಳಲ್ಲಿ ಹೋಗಿ ಕೆಲಸ ಮಾಡಿದ್ರು ಫಂಡ್ ಪರಿಷ್ಕರಣೆ ಮಾಡುತ್ತಿಲ್ಲ.ಆದಷ್ಟು ಬೇಗ ಸರ್ಕಾರ ಈ ಬಗ್ಗೆ ನಿರ್ಧಾರ ಪ್ರಕಟಿಸಬೇಕು ಇಲ್ಲದಿದ್ದರೆ ದೊಡ್ಡ ಮಟ್ಟದ ಹೋರಾಟ ಮಾಡುವ ಎಚ್ಚರಿಕೆಯನ್ನವಿದ್ಯಾರ್ಥಿಗಳು ಕೊಟ್ಟಿದ್ದಾರೆ.