Select Your Language

Notifications

webdunia
webdunia
webdunia
webdunia

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಟೋಲ್ ಸಂಗ್ರಹ ಆರಂಭ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಟೋಲ್ ಸಂಗ್ರಹ ಆರಂಭ
bangalore , ಸೋಮವಾರ, 27 ಫೆಬ್ರವರಿ 2023 (14:47 IST)
ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮೊದಲ ಟೋಲ್ ಆರಂಭವಾಗಿದ್ದು,ಬೆಂಗಳೂರು-ನಿಡಘಟ್ಟ ನಡುವಿನ ಶೇಷಗಿರಿಹಳ್ಳಿಯ ಟೋಲ್ ಕಾರ್ಯಾಚರಣೆ ಮಂಗಳವಾರದಿಂದ ಶುರುವಾಗಲಿದೆ.ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ ರಸ್ತೆಗೆ ಶುಲ್ಕ ವಸೂಲಿ ಕುರಿತು ಕೇಂದ್ರ ಹೆದ್ದಾರಿ ಪ್ರಾಧಿಕಾರದಿಂದ ಪ್ರಕಟಣೆ ಹೊರಡಿಸಿದೆ.ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿಯಾಗಿದೆ. ಹೆದ್ದಾರಿ ಪ್ರಾಧಿಕಾರ ಸರ್ವೀಸ್ ರಸ್ತೆ ಹೊರತುಪಡಿಸಿ, ಉಳಿದ ಆರು ಪಥಗಳಿಗೆ ಶುಲ್ಕ ನಿಗದಿ ಮಾಡಿದೆ. 
 
ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರು ನಡುವೆ ಸಂಚಾರ ಸಮಯವನ್ನು ಕಡಿಮೆ ಮಾಡುವ ಸಲುವಾಗಿ ಸರ್ಕಾರ ನೂತನ ಎಕ್ಸ್ಪ್ರೆಸ್ ವೇ ನಿರ್ಮಾಣಕ್ಕೆ ಮುಂದಾಗಿದೆ.ಎರಡು ಹಂತದಲ್ಲಿ ನಿರ್ಮಾಣ ಮಾಡಲಾಗುತ್ತಿರುವ  ಹೆದ್ದಾರಿಯ ಮೊದಲ ಹಂತದ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದೆ.ಎರಡನೆ ಹಂತದ ಕಾಮಗಾರಿಯು ಚಾಲ್ತಿಯಲ್ಲಿದ್ದು, ಮುಕ್ತಾಯದ ಹಂತ ತಲುಪಿದೆ.ಎರಡು ಹಂತದ ಕಾಮಗಾರಿ ಮುಗಿಯುವ ಮುನ್ನವೇ ಸರ್ಕಾರ ಮೊದಲ ಹಂತದ ಸಂಚಾರಕ್ಕೆ ಟೋಲ್ ದರ ನಿಗದಿ ಪಡಿಸಿದೆ. ಫೆ.28ರ ಮಂಗಳವಾರದಿಂದಲೇ ಈ ನಿಯಮ ಜಾರಿಗೆ ಬರಲಿದೆ.ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಟೋಲ್‌ ಶುಲ್ಕದ ವಿವರವಾಹನಗಳು ಏಕಮುಖ ಸಂಚಾರ = ಅದೇ ದಿನ ವಾಪಸ್ = ಟೋಲ್‌ ಪ್ಲಾಜಾ ಜಿಲ್ಲೆಯ ವಾಹನ= ಒಂದು ತಿಂಗಳ 50 ಸಂಚಾರಕ್ಕೆ ಪಾಸ್ ಕಾರು/ಜೀಪು/ವ್ಯಾನ್ 135 ರೂ. 205 ರೂ. 70 ರೂ. 4,525 ರೂ.ಲಘು ಗೂಡ್ಸ್ ವಾಹನ/ ಮಿನಿ ಬಸ್ 220 ರೂ. 330 ರೂ. 110 ರೂ. 7,315 ರೂ. ಬಸ್/ 2 ಆಕ್ಸಲ್‌ ಟ್ರಕ್‌ 460 ರೂ. 690 ರೂ. 230 ರೂ. 15,325 ರೂ.3 ಆಕ್ಸೆಲ್ ವಾಣಿಜ್ಯ ವಾಹನ 500 ರೂ. 750 ರೂ. 250 ರೂ. 16,715 ರೂ.ಭಾರೀ ನಿರ್ಮಾಣ ಯಂತ್ರ (4-6 ಆಕ್ಸಲ್) 720 ರೂ. 1080 ರೂ. 360 ರೂ. 24,030 ರೂ.ಅತಿಗಾತ್ರದ ವಾಹನ (7ಕ್ಕಿಂತ ಅಧಿಕ ಆಕ್ಸಲ್‌) 880 ರೂ. 1,315 ರೂ. 440 ರೂ. 29,255 ರೂ.ಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಯಲ್ಲಿ ಮತ್ತೊಂದು ಬೃಹತ್ ಹಗರಣ ಬಯಲು