Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಯಲ್ಲಿ ಮತ್ತೊಂದು ಬೃಹತ್ ಹಗರಣ ಬಯಲು

ಬಿಬಿಎಂಪಿ ಯಲ್ಲಿ ಮತ್ತೊಂದು ಬೃಹತ್ ಹಗರಣ ಬಯಲು
bangalore , ಸೋಮವಾರ, 27 ಫೆಬ್ರವರಿ 2023 (14:42 IST)
ಸ್ಥಳೀಯ ಜನಪ್ರತಿನಿಧಿಗಳು ಹಾಗೂ  ಹಲವು ಪಾಲಿಕೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಬಾಗಿಯಾಗಿದ್ದಾರೆಂದು ಎನ್ ಆರ್ ರಮೇಶ್ ಆರೋಪ ಮಾಡಿದ್ದಾರೆ.ಜಯನಗರ ವಾಣಿಜ್ಯ ಸಂಕೀರ್ಣದಲ್ಲಿ 312 ಅಕ್ರಮ ಮಳಿಗೆಗಳ ನಿರ್ಮಾಣ,ಮಳಿಗೆಗಳನ್ನು  ಕಾನೂನು ಬಾಹಿರವಾಗಿ ಹಂಚಿಕೆ ಮಾಡಿ ಹತ್ತಾರು ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ.ಹಳೆಯ ಕಟ್ಟಡವನ್ನು ತೆರವುಗೊಳಿಸಿ, BBMP ಮತ್ತು BDA ದಿಂದ ನಿರ್ಮಾಣ ವಾಗಿದ್ದ ವಾಣಿಜ್ಯ ಸಂಕೀರ್ಣ, ಪುಟ್ಟಣ್ಣ ಚಿತ್ರಮಂದಿರ"ವಿದ್ದ ಜಾಗದಲ್ಲಿ ಹೊಸ ವಾಣಿಜ್ಯ ಕಟ್ಟಡವನ್ನು ನಿರ್ಮಿಸಲಾಗಿದೆ.
 
ತೆರವುಗೊಳಿಸಲಾದ ಹಳೆಯ ಕಟ್ಟಡದಲ್ಲಿ ಕಳೆದ ನಾಲ್ಕೂವರೆ ದಶಕಗಳಿಂದ ವ್ಯಾಪಾರ - ವಹಿವಾಟು ,132 ಮಳಿಗೆಗಳ ಮಾಲೀಕರಿಗೆ ಮಾತ್ರವೇ ಹೊಸದಾಗಿ ನಿರ್ಮಿಸಲಾದ ಕಟ್ಟಡದಲ್ಲಿ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ.BBMP ಮಾರುಕಟ್ಟೆ ವಿಭಾಗದಲ್ಲಿ ಅನುಮೋದನೆಯಾಗಿದ್ದ ಮಳಿಗೆಗಳು,ಎಲ್ಲಾ ಮಳಿಗೆಗಳನ್ನು ನಿಯಮಾನುಸಾರ ಟೆಂಡರ್ ಆಹ್ವಾನಿಸಿ, ಅರ್ಹತೆ ಇರುವ ಅರ್ಜಿದಾರರಿಗೆ ಹಂಚಿಕೆ ಮಾಡುವಂತೆ ನ್ಯಾಯಾಲಯ  ಆದೇಶಿಸಿದೆ.ಆದರೆ, ನಿಯಮಾನುಸಾರ ಹಂಚಿಕೆ ಮಾಡಬೇಕಿದ್ದ 132 ಮಳಿಗೆಗಳನ್ನು ಹೊರತು ಪಡಿಸಿ ಒಟ್ಟು 312 ಮಳಿಗೆಗಳನ್ನು ಹೆಚ್ಚುವರಿಯಾಗಿ ನಿರ್ಮಾಣ ಮಾಡಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ  ತಮಗಿಷ್ಟ ಬಂದವರಿಗೆ ಪಾಲಿಕೆಯ ಮಾರುಕಟ್ಟೆ ವಿಭಾಗದ ಅಧಿಕಾರಿಗಳು ಹಂಚಿಕೆ ಮಾಡಿದ್ದಾರೆ.
 
ಹೆಚ್ಚುವರಿಯಾಗಿ ಹಂಚಿಕೆ ಮಾಡಿರುವ ಪ್ರತಿಯೊಂದು ಮಳಿಗೆಗಳಿಂದ ತಲಾ ಕನಿಷ್ಠ 25 ರಿಂದ 30 ಲಕ್ಷ ರೂಪಾಯಿಗಳಿಗೂ ಹೆಚ್ಚು ಹಣವನ್ನು ವಸೂಲಿ ಮಾಡಿದ್ದಾರೆ.ಮಾಜಿ ನಗರಸಭೆ ಸದಸ್ಯೆ ಶ್ರೀಮತಿ. ಲತಾ ವೆಂಕಟೇಶ್ ಅವರ ಪತಿ ವೆಂಕಟೇಶ್ ಮತ್ತು ಅವರ ಕುಟುಂಬದ ಸದಸ್ಯರ ಹೆಸರುಗಳಲ್ಲಿ ಒಟ್ಟು 13 ಮಳಿಗೆಗಳನ್ನು ಹಂಚಿಕೆ ಮಾಡಿದ್ದಾರೆ.ಹಾಗೆಯೇ ಪ್ರಭಾವೀ ರಾಜಕಾರಣಿಯೊಬ್ಬರ ಶಿಫಾರಸ್ಸು ಪತ್ರಕ್ಕೆ ಸ್ಪಂದಿಸಿ, ಉಮೇಶ್ ಎಂಬ ಒಬ್ಬನೇ ವ್ಯಕ್ತಿಯ ಹೆಸರಿಗೆ 04 ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಹಳೆಯ ಕಟ್ಟಡದಲ್ಲಿದ್ದ ಮೂಲ 132 ಮಳಿಗೆಗಳನ್ನು ಹೊರತುಪಡಿಸಿ, ಕಟ್ಟಡದ ಮೊದಲ ಮಹಡಿಯಲ್ಲಿ 245 ಮಳಿಗೆಗಳನ್ನು, ಒಂದನೇ ಮಹಡಿಯಲ್ಲಿ 55 ಮಳಿಗೆಗಳನ್ನು, ಎರಡನೇ ಮಹಡಿಯಲ್ಲಿ 20 ಮಳಿಗೆಗಳು,ಮೂರನೇ ಮಹಡಿಯಲ್ಲಿ 104 ಮಳಿಗೆಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ NR ರಮೇಶ್ ಆರೋಪ ಮಾಡಿದ್ದಾರೆ. 
 
ವಾಣಿಜ್ಯ ಮಳಿಗೆಗಳನ್ನು ಹಂಚಿಕೆ ಮಾಡಿ ಹತ್ತಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆಸಿರುವ ಬೃಹತ್ ಹಗರಣವನ್ನು CID ತನಿಖೆಗೆ ವಹಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಆಗ್ರಹಿಸಿರುವ N. R. ರಮೇಶ್ ಆಗ್ರಹಿಸಿದ್ದು ,ಹಾಗೆಯೇ, ಈ  ಹಗರಣದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಬೇಕೆಂದು ಹಾಗೂ ಇವರುಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪಾಲಿಕೆಯ ಆಡಳಿತಾಧಿಕಾರಿ ಮತ್ತು ಮುಖ್ಯ ಆಯುಕ್ತರಿಗೆ  N. R. ರಮೇಶ್ ಆಗ್ರಹಿಸಿದ್ದಾರೆ.
 
 ಪಾಲಿಕೆಯ ದಕ್ಷಿಣ ವಲಯದ ಜಂಟಿ ಆಯುಕ್ತರಾಗಿದ್ದ ಶ್ರೀ. V. N. ವೀರಭದ್ರಸ್ವಾಮಿ,ಪಾಲಿಕೆಯ ಮಾರುಕಟ್ಟೆ ವಿಭಾಗದ ಉಪ ಆಯುಕ್ತರಾಗಿ ಕಾರ್ಯ ನಿರ್ವಹಿಸಿರುವ ಶ್ರೀ. ಹೇಮಂತ್ ಶರಣ್, ಶ್ರೀ. ನಾಗೇಂದ್ರ ನಾಯಕ್ ಮತ್ತು ಶ್ರೀ. V. K. ಮುರಳೀಧರ್, ಪಾಲಿಕೆಯ ಮಾರುಕಟ್ಟೆ ವಿಭಾಗದ ಕಂದಾಯ ಅಧಿಕಾರಿಗಳಾದ ಶ್ರೀಮತಿ. ವರಲಕ್ಷ್ಮಿ ಮತ್ತು ಶ್ರೀಮತಿ. ಮಂಜುಳ ಹಾಗೂ ಸಹಾಯಕ ಕಂದಾಯ ಅಧಿಕಾರಿ (ಮಾರುಕಟ್ಟೆ) ಗಳಾಗಿ ಕಾರ್ಯ ನಿರ್ವಹಿಸಿರುವ ಶ್ರೀಮತಿ. ಕಾಂಚನಾ ಮತ್ತು ಶ್ರೀ. B. T. ಶಿವಕುಮಾರ್ ಅವರುಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ಬಂದಾಗ ಮಾತ್ರ ನಾಯಕರು ಕಾಣಿಸುತ್ತಾರೆ : ಅಣ್ಣಾಮಲೈ