Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಆರ್ ಅಶೋಕ್ - ಈ ಎಲೆಕ್ಷನ್ ಕಾಂಗ್ರೆಸ್ ಗೆ ಕೊನೆ ಎಲೆಕ್ಷನ್

ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಆರ್ ಅಶೋಕ್ - ಈ  ಎಲೆಕ್ಷನ್ ಕಾಂಗ್ರೆಸ್ ಗೆ ಕೊನೆ ಎಲೆಕ್ಷನ್
bangalore , ಸೋಮವಾರ, 27 ಫೆಬ್ರವರಿ 2023 (15:30 IST)
ಪ್ರವಾಹ ಬಂದಾಗ ಬಂದಿಲ್ಲ.‌ಈಗ ಮೋದಿ ಬರ್ತಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು,ಮೋದಿ,ಅಮಿತ್ ಶಾ,ರಾಜನಾಥ್ ಸಿಂಗ್,ಯೋಗಿ ಸೇರಿ ಎಲ್ಲರೂ ಬರ್ತಿದ್ದಾರೆ.ನಾಯಕತ್ವ ಇದೆ. ಅಭಿವೃದ್ಧಿ ‌ಮಾಡಿದ್ದಾರೆ ಅದಕ್ಕೆ ಬರ್ತಿದ್ದಾರೆ.ಪ್ರವಾಹ ಬಂದಾಗ ಸಿದ್ದರಾಮಯ್ಯ ‌ಅವ್ರೆ ಕಾಣಿಸಲಿಲ್ಲ.ಅವರು ಪ್ರವಾಹ ಮುಗಿದ ಮೇಲೆ ಹೋಗಿ ಬಂದರು.ನಾನು ಒಂದು  ಸವಾಲು ಹಾಕುತ್ತೆನೆ ಹಿಂದೆ ಪ್ರವಾಹ ಬಂದಾಗ ಆಗಿನ  ಮನಮೋಹನ್ ಸಿಂಗ್ ಎನ್ ಮಾಡಿದ್ರು?ನೀವು ಎಷ್ಟು ‌ಕೊಟ್ಟಿದ್ದಿರಿ.? ನಾವು ಎಷ್ಟು ಕೊಟ್ಟಿದ್ದಿನಿ ಎನ್ನೊದನ್ನ ಚರ್ಚೆ ಮಾಡೋಣ.ಪ್ರವಾಹ ನಾನು ,ಸಿಎಂ, ಬಿಎಸ್ ವೈ ಎಲ್ಲಾ ಸೇರಿ  15 ಜಿಲ್ಲೆಗಳ‌ ಪ್ರವಾಸ ಮಾಡಿದ್ದೆವು.ಪ್ರಧಾನಿ ಮೋದಿ ಅದಕ್ಕೆ  ಸಲಹೆ ನೀಡಿದ್ದರು.ಸಿದ್ದರಾಮಯ್ಯಗೆ ಬೇರೆ ಕೆಲಸ ‌ಇಲ್ಲ . ಅದಕ್ಕೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಗೆ ಬಂದಿದ್ದಾರೆ.ಅವರ ಮನೆಯವರೆಲ್ಲಾ ಅವರ ಕ್ಷೇತ್ರಕ್ಕಾಗಿ ದೇವರ ಮೊರೆ ಹೋಗಿದ್ದಾರೆ
 
40 ವರ್ಷ ರಾಜಕೀಯ ಮಾಡಿದವರು,ಸಿಎಂ ಆದವರಿಗೆ ಇಂತ ಪರಿಸ್ಥಿತಿ ಬರಬಾರದಿತ್ತು.ಸ್ವತಃ ‌ಮನೆ ಇಲ್ಲ. ನೆಂಟರ ಮನೆಗೆ ಹೋಗಿ ಬರ್ತಾರೆ ಅಷ್ಟೇ.ಕಾಂಗ್ರೆಸ್ ‌ಮನೆ ಅಲ್ಲ. ನೆಂಟರ ಮನೆಯಾಗಿದೆ.ನರೇಂದ್ರ ಮೋದಿ ೯ ವರ್ಷದಲ್ಲಿ ಎಷ್ಟು ಹಣ ಕೊಟ್ಟಿದ್ದಾರೆ ಎಂಬ ಲೆಕ್ಕ ಕೋಡುತ್ತೆವೆ.ಕಾಂಗ್ರೆಸ್ನವರೂ ಲೆಕ್ಕ ಕೊಡಲಿ ಎಂದು ಆರ್ ಅಶೋಕ್  ಸವಾಲಾಕ್ಕಿದ್ದಾರೆ.
 
ಬಿಜೆಪಿಯಲ್ಲಿ ನಾಯಕತ್ವ ಇಲ್ಲ. ಅದಕ್ಕೆ ಪ್ರಧಾನಿ ಬರ್ತಿದ್ದಾರೆ ಎಂಬ ಸಿದ್ದರಾಮಯ್ಯ ವ್ಯಂಗ್ಯ ವಿಚಾರಕ್ಕೆ ನಮ್ಮಲ್ಲಿ‌ ಬೇಕಾದಷ್ಟು ಲೀಡರ್ಸ್ ಇದ್ದಾರೆ.ಕಾಂಗ್ರೆಸ್ ‌ನಲ್ಲಿ‌ ಒಬ್ಬರು ಲೀಡರ್ಸ್ ತೋರಿಸಿ.ಎಲ್ಲಾ ಸಿಎಂ ಖುರ್ಚಿಗೆ ಟವಲ್ ಹಾಕೋರು ಮಾತ್ರ ಇದ್ದಾರೆ.ಮಂಡ್ಯ ಉಸ್ತುವಾರಿ ನೇಮಕ ವಿಚಾರವಾಗಿ ನನಗೆ ಗ್ರಾಮವಾಸ್ರವ್ಯ,ತಾಂಡಾಗಳ ಹಕ್ಕುಪತ್ರ ಸೇರಿ ಹಲವು ಕೆಲಸ‌ ಇದೆ.ಬೆಂಗಳೂರಿನಲ್ಲಿ ಕೆಂಪೇಗೌಡ  ಸೇರಿ  ಕೆಲವು ಪ್ರತಿಮೆ ಆಗಬೇಕಿದೆ.ಹೀಗಾಗಿ ನಾನು ಉಸ್ತುವಾರಿಗೆ ರಾಜನಾಮೆ ಕೊಟ್ಟಿದ್ದಿನಿ.ಉಸ್ತುವಾರಿ ಕೊಡೋದು ಸಿಎಂ ವಿವೇಚನೆ ಬಿಟ್ಟ ವಿಚಾರ ಅವರು ವಿವೇಚನೆ ಅಂತೆ ಉಸ್ತುವಾರಿ ನೇಮಕ ಮಾಡುತ್ತಾರೆ ಎಂದು ಆರ್ ಅಶೋಕ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವಸ್ಥಾನದ ಎದುರು ಸಿ ಟಿ ರವಿ ವಿರುದ್ಧ ಬೋರ್ಡ್ ನೇತು ಹಾಕಿದ ಕಾಂಗ್ರೆಸ್ ಕಾರ್ಯಕರ್ತರು