Select Your Language

Notifications

webdunia
webdunia
webdunia
webdunia

ಸುರತ್ಕಲ್​​​ನಲ್ಲಿ ರಾಜಕೀಯ ಮುಖಂಡ ಅಶೋಕ್ ರೈ ಗೂಂಡಾಗಿರಿ

Political leader Ashok Rai becomes a goon in Suratkal
ಸುರತ್ಕಲ್ , ಗುರುವಾರ, 16 ಫೆಬ್ರವರಿ 2023 (18:17 IST)
ರಿಯಲ್ ಎಸ್ಟೇಟ್ ಉದ್ಯಮಿ , ಪೂತ್ತೂರಿನ ಟಿಕೆಟ್​​​​ ಆಕಾಂಕ್ಷಿ ಅಶೋಕ್ ರೈ ಭಾರತೀಯ ಸೇನೆಯ ಯೋಧನ ಕುಟುಂಬದ ಮೇಲೆ ಅಟ್ಟಹಾಸ ಮೆರೆದಿದ್ದಾನೆ. ಸುರತ್ಕಲ್​​​ನಲ್ಲಿ ರಾಜಕೀಯ ಮುಖಂಡ ಅಶೋಕ್ ರೈ ಗೂಂಡಾಗಿರಿ ಮಾಡಿದ್ದು, ಯೋಧನಿಗೆ ಸೇರಿದ ಕಟ್ಟಡವನ್ನ ಅಶೋಕ್ ರೈ ಧ್ವಂಸಗೊಳಿಸಿದ್ದಾನೆ. ಯಾವುದೇ ದಾಖಲೆ ನೀಡದೆ ಯೋಧನ ಕುಟುಂಬದ ಕಟ್ಟಡವನ್ನ ರಾತ್ರೋರಾತ್ರಿ ಧ್ವಂಸಗೊಳಿಸಿದ್ದಾನೆ. ಜನವರಿ 9ರಂದು ಅಶೋಕ್ ರೈ ಏಕಾಏಕಿ ಕಟ್ಟಡವನ್ನ ನೆಲಸಮಗೊಳಿಸಿದ್ದಾನೆ. ಕಟ್ಟಡ ನೆಲಸಮಗೊಳಿಸಿರುವ ಅಶೋಕ್ ರೈ ವಿರುದ್ಧ ಯೋಧನ ಪತ್ನಿ ಪ್ರಭಾವತಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸುರತ್ಕಲ್​​​​ ಠಾಣಾ ಪೊಲೀಸರು ಅಶೋಕ್ ರೈ ವಿರುದ್ಧ FIR ದಾಖಲಿಸಿದ್ದಾರೆ. ಸುರತ್ಕಲ್​​ ಸಮೀಪದ ಬಾಳಾದಲ್ಲಿ ತನ್ನ ಜಾಗದ ರಸ್ತೆ ಸಂಪರ್ಕಕ್ಕೆ ಅಡ್ಡಿಯಾಗುತ್ತೆಂದು ಅಶೋಕ್ ರೈ ಬಿಲ್ಡಿಂಗ್ ಧ್ವಂಸ ಮಾಡಿದ್ದಾನೆ. ಬಿಲ್ಡಿಂಗ್​ ಇದ್ದ ಜಾಗದಲ್ಲಿ ಬಿಲ್ಡಿಂಗ್ ಹೊಡೆದು ಅಶೋಕ್ ರೈ ರಸ್ತೆ ನಿರ್ಮಿಸುತ್ತಿದ್ದಾನೆ. ಅಶೋಕ್ ರೈ ಗೂಂಡಾ ವರ್ತನೆಗೆ ಬೆಚ್ಚಿದ್ದಿರುವ ಯೋಧನ ಪತ್ನಿ ಕಣ್ಣೀರು ಹಾಕುತ್ತಿದ್ದಾರೆ. ಬೆಳಿಗ್ಗೆ ಇದ್ದ ಬಿಲ್ಡಿಂಗ್ ರಾತ್ರಿ ಇಲ್ಲದ್ದನ್ನ ನೋಡಿ ಯೋಧನ ಕುಟುಂಬಕ್ಕೆ ಆಘಾತಕ್ಕೊಳಗಾಗಿದೆ. ಈ ಅನ್ಯಾಯವನ್ನ ಪ್ರಶ್ನಿಸಿದ ಯೋಧನ ಕುಟುಂಬಕ್ಕೆ ಅಶೋಕ್ ರೈ ಬೇಕಿದ್ರೆ ಪೊಲೀಸ್ ಠಾಣೆಗೆ ಹೋಗಿ, ಕೋರ್ಟ್​ಗೆ ಹೋಗಿ ಎಂದು ಆವಾಜ್​ ಹಾಕಿದ್ದಾನೆ. ಯಾವುದೇ ದಾಖಲೆ, ಅನುಮತಿ ಪತ್ರ, ನೋಟಿಸ್ ನೀಡದೆ ದುಂಡಾವರ್ತನೆ ಮಾಡಿರುವ ಅಶೋಕ್ ರೈ ದಾದಾಗಿರಿಗೆ ಯೋಧನ ಕುಟುಂಬ ದಿಕ್ಕೇ ತೋಚದಂತಾಗಿ ಕುಳಿತಿದೆ. ಸುರತ್ಕಲ್​​ನಿಂದ 3 ಕಿ.ಮೀ ದೂರದಲ್ಲಿರುವ ಸರ್ವೆ ನಂ.185/3ನಲ್ಲಿದ್ದ ಬಿಲ್ಡಿಂಗ್​ನ್ನ ಅಶೋಕ್ ರೈ ನೆಲಸಮ ಮಾಡಿದ್ದಾನೆ

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ವಾಹನ ಸವಾರರಿಗೆ ಟ್ರಾಫಿಕ್​ ಬಿಸಿ