Publish Date: Thu, 16 Feb 2023 (15:44 IST)
Updated Date: Thu, 16 Feb 2023 (15:48 IST)
ವಿಧಾನಸಭಾ ಚುನಾವಣೆ ಹೊತ್ತಿನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ನಾಳೆ ಬಜೆಟ್ ಮಂಡನೆ ಮಾಡುತ್ತಿದ್ದು, ಇದು ಬಿಜೆಪಿಗೆ ವಿಧಾನಸಭಾ ಚುನಾವಣೆಗೆ ಬ್ರಹ್ಮಾಸ್ತ್ರವಾಗಿರಲಿದೆ. ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಮಂಡನೆಗೆ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದ್ದು, ನಾಳೆ ಸಿಎಂ ಬಸವರಾಜ ಬೊಮ್ಮಾಯಿ 2ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಚುನಾವಣೆ ಹಿನ್ನೆಲೆ ಈ ಬಾರಿಯ ರಾಜ್ಯ ಬಜೆಟ್ ಕುತೂಹಲ ಕೆರಳಿಸಿದೆ. ಈಗಾಗಲೇ ಇಲಾಖಾವಾರು ಸಭೆ ನಡೆಸಿರುವ ಸಿಎಂ, ಬಜೆಟ್ನಲ್ಲಿ ಜನಪ್ರಿಯ ಯೋಜನೆಗಳ ಘೋಷಣೆ ಸಾಧ್ಯತೆ ಇದ್ದು, ಎಲ್ಲಾ ವರ್ಗಗಳಿಗೂ ಸಿಹಿಸುದ್ದಿ ಕೊಡ್ತಾರಾ ಎಂಬ ನಿರೀಕ್ಷೆಗಳಿವೆ.