Publish Date: Thu, 16 Feb 2023 (15:48 IST)
Updated Date: Thu, 16 Feb 2023 (15:51 IST)
ಟಿಪ್ಪು ಸುಲ್ತಾನ್‌ನನ್ನ ಯಾರು ಆದರ್ಶ ಮಾಡಿಕೊಂಡಿದ್ದಾರೆ. ಟಿಪ್ಪು ಸುಲ್ತಾನ್‌ನನ್ನ ಯಾವ ರೀತಿ ಕಡೆಗಣಿಸಿದ್ದರೋ, ಇವರನ್ನ ಅದೇ ರೀತಿ ಕಡೆಗಣಿಸ್ತಾರೆ ಎಂದು ಬೆಂಗಳೂರಿನಲ್ಲಿ ಶಾಸಕ ಯತ್ನಾಳ್ ಕಾಂಗ್ರೆಸ್ ವಿರುದ್ದ ಮಾತನಾಡಿದ್ರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮೇಲಿಂದ ಮೇಲೆ ಟಿಪ್ಪು ಬಗ್ಗೆ ಮಾತಾಡ್ತಾರೆ. ಟಿಪ್ಪು ಹಿಂದೂಗಳ ಕಗ್ಗೊಲೆ ಮಡಿದ್ದಾರೆ. ಅವನನ್ನ ಕಾಂಗ್ರೆಸ್ ಆದರ್ಶ ಮಾಡಿಕೊಂಡ್ರೆ, ಸ್ಮಶಾನಕ್ಕೆ ಕೊಂಡೊಯ್ಯಬೇಕಾಗುತ್ತೆ. ಎಂದು ವಾಗ್ದಾಳಿ ಮಾಡಿದ್ರು. ರಾಜಕಾರಣದಲ್ಲಿ ಟೀಕೆ ಟಿಪ್ಪಣಿ ಇದ್ದೇ ಇರುತ್ತೆ. ಆದರೇ ಹತ್ಯೆ ಮಾಡುವ ವಿಚಾರ ಯಾರೂ ಮಾತನಾಡಬಾರದು.ಇಂತಹ ಶಬ್ದಗಳು ರಾಜಕಾರಣಕ್ಕೆ ಶೋಭೆ ತರುವುದಿಲ್ಲ ಎಂದರು. ಹಿಂದೆ ನನಗೂ ಒಬ್ಬ ಗೋ ಹತ್ಯೆ ಕಾಯ್ದೆ ತಂದ್ರೆ, ಬಿಜಾಪುರ ಶಾಸಕನನ್ನ ಹತ್ಯೆ ಮಾಡ್ತೀನಿ ಅಂತ ಧಮಕಿ ಹಾಕಿದ್ದ.ಆದ್ದರಿಂದ ಸಿದ್ಧಾಂತ, ಬಗ್ಗೆ ಎಷ್ಟೇ ಮಾತನಾಡಲಿ, ಏನೇ ಮಾತನಾಡಲಿ. ವ್ಯಕ್ತಿಯನ್ನ ಹತ್ಯೆ ಮಾಡುವ ಬಗ್ಗೆ ಮಾತನಾಡೋದು.ಇದು ಯಾರಿಗೂ ಶೋಭೆ ತರುವುದಿಲ್ಲ ಎಂದು ಹೇಳಿದ್ರು