Publish Date: Sun, 11 Feb 2024 (19:21 IST)
Updated Date: Sun, 11 Feb 2024 (19:25 IST)
ಬೆಂಗಳೂರು-ನಗರದ ಹೃದಯಭಾಗದಲ್ಲಿರುವ ಕಬ್ಬನ್ ಪಾರ್ಕಿನ ಪ್ರಶಾಂತ ವಾತಾವರಣಕ್ಕೆ ಧಕ್ಕೆ ಆಗದಿರಲೆಂದು ಹಾಗೂ ಕಾಲ್ನಡಿಗೆಗಾಗಿ ಬರುವವರ ಅನುಕೂಲಕ್ಕಾಗಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಈಗ ನಿರ್ಬಂಧವನ್ನು ಸಡಿಲಿಸುತ್ತಿರುವುದು ಪ್ರಕೃತಿ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ. ಎರಡು ಮತ್ತು ನಾಲ್ಕನೇ ಶನಿವಾರಗಳಂದು ಸರ್ಕಾರಿ ರಜಾ ದಿನಗಳಾಗಿದ್ದು, ಕಬ್ಬನ್ ಪಾರ್ಕಿಗೆ ಭೇಟಿ ನೀಡುವವರ ಸಂಖ್ಯೆ ಅಂದು ಹೆಚ್ಚಾಗುವ ಸಾಧ್ಯತೆಯಿದೆ.
ನಗರದ ಹೃದಯ ಭಾಗದಲ್ಲಿರುವ ಹಾಗೂ ನಗರದ ಶ್ವಾಸಕೋಶ ಎಂದೇ ಪರಿಗಣಿಸಲ್ಪಟ್ಟಿರುವ ಕಬ್ಬನ್ ಪಾರ್ಕಿನಲ್ಲಿ ವಾಹನ ಸಂಚಾರಕ್ಕೆ ಹೇರಿದ್ದ ನಿರ್ಬಂಧವನ್ನು ಸದ್ದಿಲ್ಲದೇ ತೆರವುಗೊಳಿಸಲಾಗುತ್ತಿದೆ. ಪ್ರತಿ ತಿಂಗಳ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರಗಳಂದು ವಾಹನಗಳಿಗೆ ಕಬ್ಬನ್ ಪಾರ್ಕ್ ಒಳಗೆ ಸಂಚರಿಸಲು ಅವಕಾಶ ನೀಡಲಾಗಿದೆ.