Publish Date: Sun, 11 Feb 2024 (17:07 IST)
Updated Date: Sun, 11 Feb 2024 (19:11 IST)
ಬೆಂಗಳೂರು : ಹಿರಿಯ ಅಧಿಕಾರಿಗಳ ಗಮನಕ್ಕೂ ತಾರದೇ, ಎಲ್ಲಾ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿದ್ದ ಪಿಎಸ್‌ಐ ಅಂಬರೀಶ್ ಆರೋಪಿಯನ್ನು ಕರೆತರಲು ಮುಂಬೈಗೆ ವಿಮಾನದಲ್ಲಿ ತೆರಳಿರುವುದು ಸಹ ಪತ್ತೆಯಾಗಿದೆ. ಹತ್ತು ದಿನಗಳ ಕಾಲ ಕಳವು ಪ್ರಕರಣದ ಆರೋಪಿಯೊಬ್ಬನನ್ನು ಅಕ್ರಮವಾಗಿ ಪೊಲೀಸ್ ಠಾಣೆಯಲ್ಲಿರಿಸಿಕೊಂಡಿದ್ದ ಅಮೃತಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಂಬರೀಶ್ ಗೆ ಮಾನವ ಹಕ್ಕುಗಳ ಆಯೋಗ ನೋಟಿಸ್ ಜಾರಿಗೊಳಿಸಿದೆ. ಡಿವೈಎಸ್‌ಪಿ ಸುಧೀರ್ ನೇತೃತ್ವದ ತಂಡ ಶನಿವಾರ ಬೆಳಗ್ಗೆ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದಾಗ ಪಿಎಸ್‌ಐ ಅಂಬರೀಶ್ ಕೃತ್ಯ ಬೆಳಕಿಗೆ ಬಂದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಡಿಸಿಪಿಗೆ ನಗರ ಪೊಲೀಸ್ ಆಯುಕ್ತ ದಯಾನಂದ್ ಸೂಚಿಸಿದ್ದಾರೆ. ಈ ಹಿಂದೆ ಕೆ.ಆರ್. ಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಶಾಸಕರಿಗೆ ಬೆಳ್ಳಿಗಧೆ ನೀಡಿ ವೇದಿಕೆಯ ಮೇಲೆ ಕುಣಿದಾಡಿದ್ದ ಅಂಬರೀಶ್ ವರ್ತನೆ ವ್ಯಾಪಕ ಟೀಕೆಗೆ ಒಳಗಾಗಿತ್ತು.