Publish Date: Sun, 11 Feb 2024 (16:00 IST)
Updated Date: Sun, 11 Feb 2024 (16:02 IST)
ಬೆಂಗಳೂರು : ಇಂದು ಮುಂಜಾನೆ 3.30 ರ ಸುಮಾರಿಗೆ ಸರಕು ತುಂಬಿದ್ದ ವಾಹನವೊಂದು ಸೇತುವೆಯಿಂದ ಕೆಳಕ್ಕುರುಳಿ ಬಿದ್ದಿರುವ ಘಟನೆ ನೈಸ್ ರೋಡ್ ನಲ್ಲಿ ನಡೆದಿದೆ. ರಾತ್ರಿ ವೇಳೆ ಅಪಘಾತ ನಡೆದ ಕಾರಣ ಅಂಡರ್ ಪಾಸ್ ಕೆಳಗೆ ಯಾವುದೇ ವಾಹನ ಸಂಚರಿಸುತ್ತಿರಲಿಲ್ಲ. ಹೀಗಾಗಿ ಭಾರೀ ಅನಾಹುತ ತಪ್ಪಿದಂತಾಗಿದೆ. ಸುಮಾರು ಹತ್ತು ಅಡಿ ಮೇಲಿನಿಂದ ಲಾರಿ ಕೆಳಕ್ಕುರುಳಿ ಬಿದ್ದಿದ್ದು, ಘಟನೆಯಲ್ಲಿ ಚಾಲಕ ಮತ್ತು ಕ್ಲೀನರ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ- ಬನ್ನೇರುಘಟ್ಟ ರಸ್ತೆ ನಡುವಿನ ಬೇಗೂರು ಸಮೀಪ ಘಟನೆ ನಡೆದಿದ್ದು, ವಾಹನದ ತೆರವು ಕಾರ್ಯ ನಡೆಯುತ್ತಿದೆ.