Publish Date: Wed, 07 Feb 2024 (19:00 IST)
Updated Date: Wed, 07 Feb 2024 (19:05 IST)
ಯಾದಗಿರಿ : ಚಾಲಕನ ನಿಯಂತ್ರಣ ತಪ್ಪಿದ ಲಾರಿ ತಲೆಕೆಳಗಾಗಿ ನದಿಯಲ್ಲಿ ಬಿದ್ದಿದೆ.ಅಡುಗೆ ಅನಿಲ ಸಿಲಿಂಡರ್ ಪೂರೈಸುವ ವಾಹನವು ಡೋಣಿ ನದಿ ದಾಟುತ್ತಿರುವಾಗ ಈ ಘಟನೆ ಸಂಭವಿಸಿತ್ತು. ಅಡುಗೆ ಅನಿಲದ ಸಿಲಿಂಡರ್‌ಗಳು ತುಂಬಿದ ಲಾರಿಯೊಂದು ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದಿರುವ ಘಟನೆ ಯಾದಗಿರಿಯ ಹುಣಸಗಿ ತಾಲೂಕಿನ ಕೊಡೆಕಲ್ ಗ್ರಾಮದಲ್ಲಿ ಬುಧವಾರ ನಡೆದಿದೆ. ಸುದೈವವಶಾತ್ ಘಟನೆಯಲ್ಲಿ ಯಾವುದೆ ಹಾನಿ ಸಂಭವಿಸಿಲ್ಲ.
ಒಂದೇ ಒಂದು ಸಿಲಿಂಡರ್ ಸ್ಪೋಟಗೊಂಡಿದ್ದರೂ ಸಹ ದೊಡ್ಡಮಟ್ಟದ ಪ್ರಮಾದ ಸಂಭವಿಸುವ ಸಾಧ್ಯತೆಯಿತ್ತು. ಅದೃಷ್ಟವಶಾತ್ ಚಾಲಕನೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.ಕೊಡೇಕಲ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲ ನಡೆಸಿದ್ದಾರೆ.