Select Your Language

Notifications

webdunia
webdunia
webdunia
webdunia

ಬಿಜೆಪಿಯ ಡೋಂಗಿ ನಾಯಕರು ಪ್ರತಿಭಟನೆಯ ನಾಟಕ ಮಾಡುತ್ತಿದ್ದಾರೆ

Krisna Byregowda

geetha

bangalore , ಭಾನುವಾರ, 11 ಫೆಬ್ರವರಿ 2024 (18:00 IST)
ಬೆಂಗಳೂರು :  ಭಾನುವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೇಂದ್ರದ ಗೃಹಸಚಿವರ ಜೊತೆ ಸಭೆ ನಡೆಸಿ ಬರ ಪರಿಹಾರ ಕೊಡಿಸಲು ಯೋಗ್ಯತೆ ಇಲ್ಲದ ಬಿಜೆಪಿ ಡೋಂಗಿ ನಾಯಕರು ಪ್ರತಿಭಟನೆಯ ನಾಟಕ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.ರಾಜ್ಯ ಬಿಜೆಪಿಯವರೂ ಸಹ ಒಂದು ಒಕ್ಕೂಟವನ್ನು ಮಾಡಿಕೊಂಡಿದ್ದಾರೆ. ಯಾವಾಗ ಬೇಕಾದರೂ ಅವರು ಕೇಂದ್ರ ಗೃಹಸಚಿವರೊಡನೆ ಮಾತುಕತೆ ನಡೆಸಬಹುದು. ಸುಮ್ಮನೆ ಅಲ್ಲಿ ಇಲ್ಲಿ ಪ್ರತಿಭಟನೆ ಮಾಡಿ ನಾಟಕ ಮಾಡುವ ಬದಲು ತಮ್ಮ ಕರ್ತವ್ಯ ನಿರ್ವಹಿಸಲಿ ಎಂದು ವಾಗ್ದಾಳಿ ನಡೆಸಿದ ಸಚಿವರು, ವಿಪಕ್ಷ ನಾಯಕರಾಗಿ ಇವರು ತಮ್ಮ ಪ್ರಯತ್ನವನ್ನೇ ನಡೆಸದಿದ್ದಾಗ ಇದನ್ನು ನಾಟಕವೆಂದೇ ಹೇಳಬೇಕಾಗಿದೆ ಎಂದರು. 

ವಿಪಕ್ಷ ನಾಯಕರಿಗೆ ಕೇಂದ್ರ ಸಚಿವರು ಖಂಡಿತಾ ಸಮಯ ನೀಡುತ್ತಾರೆ. ಆದರೆ ಇವರಿಗೆ ಸಮಯ ಕೇಳುವಷ್ಟು ಧೈರ್ಯ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದು ಟೀಕಿಸಿದ ಕೃಷ್ಣ ಬೈರೇಗೌಡ ಕನಿಷ್ಠ ತಮ್ಮ ಪ್ಯತ್ನವನ್ನಾದಲೀ ಮಾಡಲಿ. ಇಲ್ಲದಿದ್ದರೆ ತಮ್ಮ ಡೋಂಗಿತನ ಸಾಬೀತಾಗಲಿದೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸೇತುವೆಯಿಂದ ಕೆಳಕ್ಕುರುಳಿದ ಲಾರಿ