Select Your Language

Notifications

webdunia
webdunia
webdunia
webdunia

ಇಂದು ಅಮಿತ್ ಶಾ ಮುಂದೆ ರಾಜ್ಯ ನಾಯಕರ ಮೀಟಿಂಗ್

Amit Shah
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ತಯಾರಿ ನಡೆಸಲು ಗೃಹಸಚಿವ ಅಮಿತ್ ಶಾ ಇಂದು ರಾಜ್ಯದಲ್ಲಿ ಬಿಜೆಪಿ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಗೊಂದಲಗಳಿವೆ. ಈ ಎಲ್ಲಾ ಗೊಂದಲಗಳು ಮತ್ತು ಯಾರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ಎನ್ನುವುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ರಾಜ್ಯದಲ್ಲಿ ಚುನಾವಣಾ ಕಾರ್ಯತಂತ್ರದ ಬಗ್ಗೆ ಅವರು ಚರ್ಚೆ ನಡೆಸಲಿದ್ದಾರೆ.

ಮೈಸೂರಿನಿಂದ ತಯಾರಿ ಆರಂಭ
ನಾಳೆ ಸುಮಾರು ಎರಡು ಗಂಟೆಗಳ ಕಾಲ ಪಕ್ಷದ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ರಾಜ್ಯದಲ್ಲಿ ಲೋಕಸಭೆ ಚುನಾವಣೆಯನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಮುಖಂಡರಿಗೆ ಸೂಚನೆ ನೀಡಲಿದ್ದಾರೆ.

ಮೈಸೂರು ಕ್ಲಸ್ಟರ್ ಮಾತ್ರವಲ್ಲದೆ, ಉಳಿದ 7 ಕ್ಲಸ್ಟರ್ ಗಳಲ್ಲೂ ಅಮಿತ್ ಶಾ ಸಭೆ ನಡೆಸಲಿದ್ದಾರೆ. ಫೆಬ್ರವರಿ 17 ಮತ್ತು 18 ರಂದು ದೆಹಲಿಯಲ್ಲಿ ಬಿಜೆಪಿ ಕಾರ್ಯಕಾರಣಿ ನಡೆಯಲಿದ್ದು, ಅದಾದ ಬಳಿಕ ಮತ್ತಷ್ಟು ಕರ್ನಾಟಕದ ಕಡೆಗೆ ಗಮನ ಹರಿಸುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೆಡ್ಡಿ ಡೇ ಯಾಕೆ ಆಚರಿಸುತ್ತಾರೆ ಗೊತ್ತಾ? ಈ ಹೆಸರು ಬಂದಿದ್ದು ಹೇಗೆ?