Publish Date: Thu, 23 Feb 2023 (15:40 IST)
Updated Date: Thu, 23 Feb 2023 (15:44 IST)
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದಿಂದ ಫೆ.24ರ ಮಧ್ಯಾಹ್ನದವರೆಗೆ ನಗರದ ಕೆಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ಆಯ್ದ ಕೆಲ ರಸ್ತೆಗಳ ಎರಡೂ ಬದಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆ ನಿಷೇಧಿಸಿದ್ದಾರೆ. ಬಳ್ಳಾರಿ ರಸ್ತೆ, ಮೇಖ್ರಿ ಸರ್ಕಲ್, ಕಾವೇರಿ ಥಿಯೇಟರ್ ಜಂಕ್ಷನ್, ರೇಸ್‌ಕೋರ್ಸ್ ರಸ್ತೆ, ತಾಜ್‌ವೆಸ್ಟ್ ಎಂಡ್, ಟೌನ್‌ಹಾಲ್, ಲಾಲ್‌ಬಾಗ್ ರಸ್ತೆ, ಮಿನರ್ವ ರಸ್ತೆ, ಜೆ.ಸಿ.ರಸ್ತೆ, ಎನ್.ಆರ್.ಚೌಕ, ಮೈಸೂರು ಬ್ಯಾಂಕ್ ವೃತ್ತ, ಪ್ಯಾಲೇಸ್ ರಸ್ತೆ, ಎಂ.ಜಿ.ರಸ್ತೆ, ಟ್ರಿನಿಟಿ ಚರ್ಚ್ ಸರ್ಕಲ್, ಕಮಾಂಡ್ ಹಾಸ್ಪಿಟಲ್, ದೊಮ್ಮಲೂರು ವಾಟರ್‌ಟ್ಯಾಂಕ್, ಇಂದಿರಾನಗರ 100 ಅಡಿ ರಸ್ತೆ ಜಂಕ್ಷನ್, ಐಎಸ್‌ಆರ್‌ಓ ಜಂಕ್ಷನ್, ಎಚ್‌ಎಎಲ್, ಏರ್‌ಪೋರ್ಟ್ ರಸ್ತೆಗಳ ಎರಡೂ ಬದಿ ಎಲ್ಲಾ ಮಾದರಿಗಳ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಸಾರ್ವಜನಿಕರು ಅಂದು ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸಲು ಕೋರಿದ್ದಾರೆ.