ವಿಧಾನಸೌದದಲ್ಲಿ ಮಾತನಾಡಿದ ಸಿಟಿ ರವಿ ನಾನು ನಾನ್ ವೆಜ್ ತಿಂದಿದ್ದು ಹೌದು ಆದ್ರೆ ದೇವಸ್ಥಾನದ ಗರ್ಭಗುಡಿಗೆ ಹೊಗಲಿಲ್ಲ.ದೇವಸ್ಥಾನದ ಪ್ಯಾಸೇಜ್ ಬಳಿ ಮಾತ್ರ ಹೊಗಿದ್ದು.ಗರ್ಭಗುಡಿಯ ಹೊರಭಾಗದಲ್ಲಿ ಇದ್ದೆ.
ದೇವಸ್ಥಾನದ ಆವರಣದಲ್ಲಿ ಕಟ್ಟಡ ಕಟ್ಟಲು ಮುಸ್ಲಿಮರು ಅವಕಾಶ ಕೊಟ್ಟಿರಲಿಲ್ಲ.ಅದ್ರ ವೀಕ್ಷಣೆಗೆ ತೆರಳಿದ್ದೇ, ಅಲ್ಲಿಯ ಸ್ಥಳೀಯರೇ ಕರೆದುಕೊಂಡು ಹೋಗಿದ್ದು.ಎಲ್ಲವನ್ನೂ ಎದೆ ಬಗೆದು ತೊರಿಸಲು ನಾನು ಹನುಮಂತ ಅಲ್ಲ ಎಂದು ಸಿಟಿ ರವಿ ಹೇಳಿದ್ರು.
ಅಲ್ಲದೇ ಕಾಂಗ್ರೆಸ್ನವರಂತೆ ನಾನು ತಿಂದು ಹೊಗಿದ್ದೆ ಏನ್ ಈಗ ಅಂತ ನಾನು ಹೇಳಲ್ಲ.ಕೆಲವು ವೆಜ್ ಮತ್ತು ನಾನ್ ವೆಜ್ ದೇವಸ್ಥಾನಗಳಿಗೆ ಅಲ್ಲಿಗೆ ಮಾಂಸಹಾರಿ ನೈವೇದ್ಯ ಮಾಡಲಾಗುತ್ತೆ ಅಂಥ ದೇವಸ್ಥಾನಗಳಿಗೆ ಹೊಗಬಹುದು.ಆದ್ರೆ ನಾನು ನಾನ್ ವೆಜ್ ತಿಂದಿದ್ದೆ ಅನ್ನೋದನ್ನ ಮರೆತಿದ್ದೆ.ಅದು ನನ್ನ ಭೇಟಿಯ ಉದ್ದೇಶವಾಗಿರಲಿಲ್ಲ.ಅಲ್ಲಿನ ಸ್ಥಳೀಯರ ಅಪೇಕ್ಷೆ ಮೇರೆಗೆ ಹೋಗಿದ್ದೆ.ಹೀಗಾಗಿ ನಾನು ದೇವಸ್ಥಾನ ಪ್ಯಾಸೇಜ್ ಬಳಿ ಮಾತ್ರ ಹೋಗಿದ್ದೆ ಎಂದು ಸಿ.ಟಿ ರವಿ ಸ್ಪಷ್ಟ ಪಡಿಸಿದಾರೆ.