Publish Date: Thu, 05 Dec 2019 (19:46 IST)
Updated Date: Thu, 05 Dec 2019 (19:48 IST)
ರಾಜ್ಯದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರಿಗೆ ವೋಟ್ ಹಾಕಿರೋ ವಿವಿ ಪ್ಯಾಟ್ ನ ಮುದ್ರಣದ ಫೋಟೋ ವೈರಲ್ ಆಗಿದೆ.
ಬಿಜೆಪಿ ಅಭ್ಯರ್ಥಿ ನಾರಾಯಣಗೌಡರಿಗೆ ಮತ ಹಾಕಿದ ವಿವಿ ಪ್ಯಾಟ್ ಮುದ್ರಣದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಡ್ಯದ ಕೆ.ಆರ್. ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ನಾರಾಯಣಗೌಡರಿಗೆ ಮತ ಹಾಕಿರುವ ಮತದ ಪ್ರತಿ ವೈರಲ್ ಆಗಿದೆ. ತಾಲ್ಲೂಕಿನ ಕರೋಟಿ ಗ್ರಾಮದ ಅನಿಲ್ ಗೌಡ ಎಂಬ ಯುವಕ ಈ ಫೋಟೋ ವೈರಲ್ ಮಾಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಜೆಡಿಎಸ್ ವಲಯದಲ್ಲಿ ಚರ್ಚೆ ನಡೆಯುತ್ತಿದ್ದು, ದೂರು ಕೊಡುವ ಸಾಧ್ಯತೆ ಇದೆ.