Select Your Language

Notifications

webdunia
webdunia
webdunia
webdunia

19 ಏಜ್ ಈಸ್ ನಾನ್ಸೆನ್ಸ್: ಕೌತುಕದ ಕಿಡಿ ಹೊತ್ತಿಸಿದ ಟ್ರೇಲರ್!

19 ಏಜ್ ಈಸ್ ನಾನ್ಸೆನ್ಸ್: ಕೌತುಕದ ಕಿಡಿ ಹೊತ್ತಿಸಿದ ಟ್ರೇಲರ್!
ಬೆಂಗಳೂರು , ಬುಧವಾರ, 4 ಡಿಸೆಂಬರ್ 2019 (13:43 IST)
ಲೋಕೇಶ್ ನಿರ್ಮಾಣದಲ್ಲಿ ಮೂಡಿ ಬಂದಿರುವ 19 ಏಜ್ ಈಸ್ ನಾನ್ಸೆನ್ಸ್ ಚಿತ್ರ ಒಂದು ಟ್ರೇಲರ್ ಮೂಲಕ ಕೌತುಕದ ಕಿಡಿ ಹೊತ್ತಿಸಿದ ರೀತಿ ನಿಜಕ್ಕೂ ಸಮ್ಮೋಹಕವಾದದ್ದು. ಈ ಸಿನಿಮಾ ಚಿತ್ರೀಕರಣದ ಹಂತದಲ್ಲಿ ಯಾವ ಸದ್ದುಗದ್ದಲವೂ ಇಲ್ಲದಂತೆ ಸಾಗಿ ಬಂದಿತ್ತು. ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಹೊರ ತಂಡ ಟ್ರೇಲರ್ ಮೂಡಿ ಬಂದ ರೀತಿಗೆ ಪ್ರೇಕ್ಷಕರೆಲ್ಲ ಫಿದಾ ಆಗಿದ್ದರು. ಕಡಿಮೆ ಅವಧಿಯಲ್ಲಿಯೇ ವ್ಯಾಪಕ ವೀಕ್ಷಣೆ ಪಡೆಯುತ್ತಾ ಒಳ್ಳೆ ಅಭಿಪ್ರಾಯವನ್ನೂ ತನ್ನದಾಗಿಸಿಕೊಂಡಿದ್ದ ಈ ಟ್ರೇಲರ್ ಇತ್ತೀಚಿನ ದಿನಗಳಲ್ಲಿ ಬಂದಿರೋ ಪ್ರಾಮಿಸಿಂಗ್ ಟ್ರೇಲರ್ಗಳಲ್ಲಿ ಒಂದಾಗಿ ದಾಖಲಾಗಿದೆ.

ಮನುಷ್ ಈ ಚಿತ್ರದಲ್ಲ್ಲಿ ನಾಯಕನಾಗಿ ನಟಿಸಿದ್ದಾನೆ. ಇನ್ನೂ ಹತ್ತೊಂಬತ್ತರ ಹರೆಯದ ಮನುಷ್ಗೆ ಸಂಪೂರ್ಣ ತರಬೇತಿ ಕೊಡಿಸಿಯೇ ಅಖಾಡಕ್ಕಿಳಿಸಲಾಗಿದೆ ಅಂತ ಈ ಹಿಂದೆಯೇ ಚಿತ್ರತಂಡ ಹೇಳಿಕೊಂಡಿತ್ತು. ಈ ಟ್ರೇಲರ್ ಮೂಲಕ ಈ ಹುಡುಗ ಅದೆಂಥಾ ತಯಾರಿ ಮಾಡಿಕೊಂಡಿದ್ದಾನೆಂಬ ಸ್ಪಷ್ಟ ಸುಳಿವುಗಳು ಸಿಕ್ಕಿವೆ. ಹತ್ತೊಂಬತ್ತರ ಹರೆಯ ಅಂದರೆ ಒಳ್ಳೆಯದ್ದು ಕೆಟ್ಟದ್ದೆಂಬ ಬೇಧ ಭಾವವಿಲ್ಲದೆ ಎಲ್ಲದರತ್ತಲೂ ಆಕರ್ಷಣೆಗೀಡಾಗೋ ಕಾಲಘಟ್ಟ. ಆ ವಯಸ್ಸಿನ ಉನ್ಮಾದದ ಕಥೆಯಷ್ಟೇ ಇಲ್ಲಿಲ್ಲ. ಬದಲಾಗಿ ಎಲ್ಲರಿಗೂ ಹತ್ತಿರಾಗುವಂಥಾ ಫ್ಯಾಮಿ ಕಥನವೂ ಇದೆ. ಭರ್ಜರಿಯಾದ ಸಾಹಸ ಸನ್ನಿವೇಶಗಳೂ ಈ ಟ್ರೇಲರ್ ಮೂಲಕ ಕಾಣಿಸಿವೆ. ಈ ಟ್ರೇಲರ್ ನಾನ್ಸೆನ್ಸ್ ಏಜಿನ ಬಗ್ಗೆ ಪ್ರೇಕ್ಷಕರ ಕುತೂಹಲ ಕೆರಳಿಸುವಂತೆ ಮಾಡಿದೆ.
webdunia

ಈ ಟ್ರೇಲರ್ನಲ್ಲಿ ಇಡೀ ಕಥೆಯ ಸಾರದ ಚಹರೆಯನ್ನು ಛಾಪಿಸಿರುವ ರೀತಿಯೇ ಸಮ್ಮೋಹಕವಾಗಿದೆ. ಇದರಲ್ಲಿ ಕಥೆಯ ಸುಳಿವುಗಳು ಅದೆಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿವೆಯೋ, ಅಷ್ಟೇ ತೀವ್ರವಾದ ರೀತಿಯಲ್ಲಿ ಗಮನ ಸೆಳೆದಿರೋದು ನಾಯಕ ಮನುಷ್ ನಟನೆ. ಈತನಿಗಿದು ಮೊದಲ ಚಿತ್ರ. ವಯಸ್ಸಿನ್ನೂ ಹತ್ತೊಂಬತ್ತು. ಆದರೆ ಈ ಮೊದಲ ಪ್ರಯತ್ನದಲ್ಲಿಯೇ ಪಳಗಿದ ನಟರಂತೆಯೇ ನಟಿಸೋ ಮೂಲಕ ಈ ಹುಡುಗ ಎಲ್ಲರಿಗೂ ಇಷ್ಟವಾಗಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ವಿಶಿಷ್ಟ ಶೈಲಿಯಲ್ಲಿ ಹೀರೋ ಆಗಿ ನೆಲೆ ಕಂಡುಕೊಳ್ಳುವ ಲಕ್ಷಣಗಳನ್ನೂ ಕೂಡಾ ಜಾಹೀರು ಮಾಡಿದ್ದಾರೆ. ಇಷ್ಟೆಲ್ಲ ಬಗೆಯಲ್ಲಿ ಹವಾ ಸೃಷ್ಟಿಸಿರುವ ಈ ಚಿತ್ರ ಡಿಸೆಂಬರ್ ಆರರಂದು ತೆರೆಗಾಣುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಡೆಯ 700 ಥಿಯೇಟರ್ ಗಳಲ್ಲಿ ಬಿಡುಗಡೆ