Select Your Language

Notifications

webdunia
webdunia
webdunia
webdunia

ಕೆ.ಆರ್.ಪೇಟೆ ಕ್ಷೇತ್ರದ ಮತದಾರರಿಂದ ಅನರ್ಹರಿಗೆ ಬಿಗ್ ಶಾಕ್

ಕೆ.ಆರ್.ಪೇಟೆ ಕ್ಷೇತ್ರದ ಮತದಾರರಿಂದ ಅನರ್ಹರಿಗೆ ಬಿಗ್ ಶಾಕ್
ಮಂಡ್ಯ , ಬುಧವಾರ, 4 ಡಿಸೆಂಬರ್ 2019 (11:22 IST)
ಮಂಡ್ಯ : ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೆಮ್ಮನಹಳ್ಳಿಯಲ್ಲಿ ಮತದಾರರು, ಮತ ಕೇಳಲು ಬರುವ ಅನರ್ಹ ಶಾಸಕರಿಗೆ ಬಿಗ್ ಶಾಕ್ ನೀಡಿದ್ದಾರೆ.



ಹೌದು. ಇಲ್ಲಿನ ಕೆಲವು ಜನರು ತಮ್ಮ ಮನೆ ಬಾಗಿಲಿಗೆ ಹಾಗೂ ಗೋಡೆಗೆ ’ಸರ್ವೋಚ್ಚ ನ್ಯಾಯಾಲಯವು ಅನರ್ಹಗೊಳಿಸಿದ ಅನರ್ಹ ಶಾಸಕರಿಗೆ ನಮ್ಮ ಮನೆಗೆ ಪ್ರವೇಶವಿಲ್ಲಾ’ ಎಂಬ ಚೀಟಿ ಅಂಟಿಸಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಬಳಿಕ ಈ ಸ್ಥಳಕ್ಕೆ ಚುನಾವಣಾಧಿಕಾರಿಗಳು ಬಂದು ಅದನ್ನು ತೆರವುಗೊಳಿಸಿದ್ದಾರೆ ಎನ್ನಲಾಗಿದೆ.


ಈ ಹಿಂದೆ ಬೆಳಗಾವಿಯ ಅಥಣಿಯ ಗ್ರಾಮವೊಂದರಲ್ಲಿಯೂ ಕೂಡ ಅನರ್ಹರಿಗೆ ಗ್ರಾಮಕ್ಕೆ ಪ್ರವೇಶವಿಲ್ಲ ಎಂದು ಬೋರ್ಡ್ ಹಾಕಲಾಗಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಷದ ಸಹಕಾರ ಸಿಗುತ್ತಿಲ್ಲವೆಂದು ಬೇಸರಗೊಂಡ ಜೆಡಿಎಸ್ ಅಭ್ಯರ್ಥಿ