ಬೆಂಗಳೂರು: ಅಮಾನತಾದ ಬಿಜೆಪಿ ಶಾಸಕರೆಲ್ಲರೂ ನನ್ನ ಫ್ರೆಂಡ್ಸ್. ಆದರೆ ನೆಪ ಇಟ್ಟುಕೊಂಡು ಕಲಾಪಕ್ಕೆ ಅಡ್ಡಿಪಡಿಸಲು ಯತ್ನಿಸಿದರು ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.
ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಅವರು ಬಿಜೆಪಿ ಶಾಸಕರ ಅಮಾನತಿನ ಬಗ್ಗೆ ಸಮರ್ಥನೆ ನೀಡಿದ್ದಾರೆ. ಮೊನ್ನೆ ಸದನದಲ್ಲಿ ಗದ್ದಲವೆಬ್ಬಿಸಿದ ಬಿಜೆಪಿಯ 18 ಶಾಸಕರನ್ನು ಸ್ಪೀಕರ್ ಆರು ತಿಂಗಳಿಗೆ ಅಮಾನತು ಮಾಡಿದ್ದರು. ಇದರ ಬಗ್ಗೆ ಇಂದು ಮತ್ತೊಮ್ಮೆ ಮಾಧ್ಯಮಗಳಿಗೆ ಯುಟಿ ಖಾದರ್ ಹೇಳಿದ್ದಾರೆ.
ಹನಿಟ್ರ್ಯಾಪ್ ಬಗ್ಗೆ ತನಿಖೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿಯವರು ಗಲಾಟೆ ಶುರು ಮಾಡಿದ್ರು. ಸಿಎಂ ಸಿದ್ದರಾಮಯ್ಯನವರು ಬಹಳ ಸ್ಪಷ್ಟವಾಗಿ ಸಮಿತಿ ಮಾಡಿ ಈ ಬಗ್ಗೆ ತನಿಖೆ ಮಾಡುತ್ತೇವೆ, ನಿಮ್ಮ ಸಲಹೆಯನ್ನೂ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ ಮೇಲೂ ಬಜೆಟ್ ವಿಷಯವನ್ನೂ ಚರ್ಚೆ ಮಾಡಲೂ ಅವಕಾಶ ಕೊಡದೇ ಗದ್ದಲವೆಬ್ಬಿಸುವುದು ಸರಿಯಾ?
ಆದ ಕಾರಣ ನಾನು ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಯಿತು. ಯುಟಿ ಖಾದರ್ ಆಗಿ ಕ್ಷಮಿಸಬಹುದು. ಆದರೆ ಸ್ಪೀಕರ್ ಸ್ಥಾನಕ್ಕೆ ಗೌರವವಿದೆಯಲ್ಲಾ? ಸ್ಪೀಕರ್ ಸ್ಥಾನ ಕ್ಷಮಿಸಲು ಸಾಧ್ಯವಿಲ್ಲ. ನಾನು ಕ್ರಮ ಕೈಗೊಳ್ಳದೇ ಇದ್ದರೆ ನಮ್ಮ ರಾಜ್ಯದ ಮರ್ಯಾದೆ ಏನಾಗುತ್ತಿತ್ತು? ಮುಂದೆ ಒಳ್ಳೆಯ ನಡತೆ ಕಲಿಯಲಿ ಎಂದು ಈ ಕ್ರಮ ಕೈಗೊಂಡಿದ್ದು ಎಂದು ಯುಟಿ ಖಾದರ್ ಹೇಳಿದ್ದಾರೆ.