ಬೆಂಗಳೂರು: ನಗರದ ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯಲ್ಲಿ ನೋಡು ನೋಡುತ್ತಿದ್ದಂತೇ ಬೃಹತ್ ತೇರು ಬೀಳುವ ದೃಶ್ಯವೊಂದು ವೈರಲ್ ಆಗಿದೆ. ಈ ಘಟನೆಯಲ್ಲಿ ಓರ್ವ ಬಾಲಕಿ ಸಾವನ್ನಪ್ಪಿದ್ದು ಹಲವರಿಗೆ ಗಾಯವಾಗಿದೆ.
ಮಾರ್ಚ್ 22, 23 ರಂದು ಮದ್ದೂರಮ್ಮ ಜಾತ್ರೆಯಿತ್ತು. ಈ ಜಾತ್ರೆಯಲ್ಲಿ ಪ್ರತೀ ವರ್ಷವೂ ಆಕರ್ಷಕ ತೇರು ಎಲ್ಲರ ಗಮನ ಸೆಳೆಯುತ್ತದೆ. ಈ ಬಾರಿಯೂ ಬಣ್ಣ ಬಣ್ಣದ ಆಕರ್ಷಕ ತೇರು ಎಲ್ಲರ ಗಮನ ಸೆಳೆದಿತ್ತು.
ಹಲವರು ಜಾತ್ರೆಯಲ್ಲಿ ಪಾಲ್ಗೊಂಡು ತೇರು ಎಳೆಯುವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ತೇರು ಸುಮಾರು 20-25 ಅಡಿ ಎತ್ತರವಿರುತ್ತದೆ. ಬಹಳ ಶ್ರಮವಹಿಸಿ ಇದನ್ನು ನಿರ್ಮಿಸಲಾಗುತ್ತದೆ.
ಆದರೆ ಈ ಬಾರಿ ಅದೇನಾಯಿತೋ, ಇದ್ದಕ್ಕಿದ್ದಂತೇ ಮೆರವಣಿಗೆ ವೇಳೆ ತೇರು ಕುಸಿದು ಬಿದ್ದಿದೆ. ಪರಿಣಾಮ ಅಕ್ಕಪಕ್ಕದಲ್ಲಿದ್ದವರ ಮೈಮೇಲೆ ತೇರು ಬಿದ್ದಿದೆ. ಘಟನೆಯಲ್ಲಿ ಗೊಂಬೆ ಮಾರಲೆಂದು ಬಂದಿದ್ದ 12 ವರ್ಷದ ಜ್ಯೋತಿ ಎಂಬ ಬಾಲಕಿ ಮತ್ತು ಲೋಹಿತ್ ಎಂಬ ಯುವಕ ಮೃತಪಟ್ಟಿದ್ದಾರೆ. ಉಳಿದಂತೆ ಹಲವರಿಗೆ ಗಾಯವಾಗಿದೆ. ಈ ಭೀಕರ ದೃಶ್ಯ ಇಲ್ಲಿದೆ ನೋಡಿ.