ಉಡುಪಿ : ಕರಾವಳಿ ಆಗಸದಲ್ಲಿ ಸೋಮವಾರ ರಾತ್ರಿ ಕೌತುಕವೊಂದು ನಡೆದಿದೆ. ಸಾಲಿನಲ್ಲಿ ನಕ್ಷತ್ರಗಳು ಚಲಿಸಿದಂತೆ ಉಪಗ್ರಹಗಳು ಬಾನಿನಲ್ಲಿ ಗೋಚರಿಸಿದ್ದು ಉಡುಪಿ ಜನತೆಯನ್ನು ನಿಬ್ಬೆರಗಾಗಿಸಿದೆ.
ಅಮೇರಿಕಾದ ಕ್ಯಾಲಿಫೋರ್ನಿಯಾದಿಂದ ಉಪಗ್ರಹಗಳು ಇಂಟರ್ನೆಟ್ ಶನಿವಾರ ಲಾಂಚ್ ಮಾಡಲಾಗಿದೆ. ಈ ಉಪಗ್ರಹ ಬಾನಲ್ಲಿ ಸಾಲಾಗಿ ಪರಿಭ್ರಮಿಸುತ್ತದೆ. ಈ ದೃಶ್ಯ ಉಡುಪಿಯಲ್ಲಿ ಜನರ ಬರಿಗಣ್ಣಿಗೆ ಕಾಣಿಸಿದೆ. ಎಲೋನ್ ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಕಂಪನಿಗೆ ಸೇರಿದ ಉಪಗ್ರಹಗಳು ಇವು.
ಸ್ಟಾರ್ ಲಿಂಕ್ ಕಂಪನಿಯು ಈಗಾಗಲೇ ಸುಮಾರು 60 ಕ್ಕೂ ಮಿಕ್ಕಿ ಇಂತಹ ಉಪಗ್ರಹಗಳನ್ನು ನಭಕ್ಕೆ ಬಿಡುಗಡೆ ಮಾಡಿದೆ. ಈ ಪೈಕಿ 52 ಉಪಗ್ರಹ ಒಂದೇ ದಿನ ಉಡಾವಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸುಮಾರು 1,800 ಇಂಟರ್ನೆಟ್ ಉಪಗ್ರಹಗಳನ್ನು ಆಗಸಕ್ಕೆ ಕಳುಹಿಸುವ ತಯಾರಿ ನಡೆಸಲಾಗುತ್ತಿದ್ದು, ಮುಂದೊಂದು ದಿನ ವಿಶ್ವಕ್ಕೆ ಉಚಿತ ಅಥವಾ ಬಹಳ ಕಡಿಮೆ ಮೊತ್ತಕ್ಕೆ ಇಂಟರ್ನೆಟ್ ಲಭ್ಯ ಆಗಲಿದೆ.