ಪ್ರಧಾನಮಂತ್ರಿ ನರೇಂದ್ರ ಮೋದಿ ಮೂರು ದಿನಗಳ ಅಮೆರಿಕ ಪ್ರವಾಸ ಮುಗಿಸಿ ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿಗೆ ಪಕ್ಷದ ನಾಯಕರು ಹಾಗೂ ಬೆಂಬಲಿಗರು ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಇತರ ಬಿಜೆಪಿ ನಾಯಕರು ಪ್ರಧಾನಿಗೆ ಶುಭಾಶಯ ಕೋರಿದ್ದಾರೆ. ಈ ವೇಳೆ ಜೆ.ಪಿ ನಡ್ಡಾ, ಮೋದಿ ಮತ್ತು ಬೈಡೆನ್ ಸ್ನೇಹ ತುಂಬಾ ಹಳೆಯದು ಎಂದಿದ್ದಾರೆ. ಮೋದಿ ಅಮೆರಿಕ ಭೇಟಿ ಭಾರತ-ಯುಎಸ್ಎ ಸ್ನೇಹ ಮತ್ತಷ್ಟು ಬಲಪಡಿಸುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಇನ್ನು ಪ್ರಧಾನಿ ತಾಯ್ನಾಡಿಗೆ ವಾಪಸ್ ಆಗುವಾಗ ಭಾರತಕ್ಕೆ ಸೇರಿದ್ದ 157 ಅತ್ಯಮೂಲ್ಯ ಪುರಾತನ ಕಲಾಕೃತಿಗಳನ್ನ ಮೋದಿಗೆ ಬೈಡೆನ್ ಉಡುಗರೆಯಾಗಿ ನೀಡಿದ್ದಾರೆ. ಇವುಗಳು 10 ಮತ್ತು 12ನೇ ಶತಮಾನದ ಪುರಾತನ ದೇವರ ವಿಗ್ರಹಗಳಾಗಿವೆ.