Select Your Language

Notifications

webdunia
webdunia
webdunia
webdunia

ಏರಿಕೆ ಗತಿಯಲ್ಲಿ ಓಮಿಕ್ರಾನ್! ಪ್ರಕರಣಗಳ ಸಂಖ್ಯೆ ಎಷ್ಟು?

ಏರಿಕೆ ಗತಿಯಲ್ಲಿ ಓಮಿಕ್ರಾನ್! ಪ್ರಕರಣಗಳ ಸಂಖ್ಯೆ ಎಷ್ಟು?
ಬೆಂಗಳೂರು , ಮಂಗಳವಾರ, 21 ಡಿಸೆಂಬರ್ 2021 (06:57 IST)
ಬೆಂಗಳೂರು : ರಾಜ್ಯದಲ್ಲಿ ಓಮಿಕ್ರಾನ್ ಪಾಸಿಟಿವ್ ಕೇಸ್ಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 19ಕ್ಕೆ ಏರಿಕೆ ಕಂಡಿದೆ.
 
ಇಂದು 5 ಒಮಿಕ್ರಾನ್ ಕೇಸ್ ಪತ್ತೆಯಾಗಿದ್ದು, ಧಾರವಾಡ, ಭದ್ರಾವತಿ, ಉಡುಪಿ ಮತ್ತು ಮಂಗಳೂರಿನಲ್ಲಿ ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಈ ನಡುವೆ ರಾಜ್ಯದಲ್ಲಿ ಒಟ್ಟು 286 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 7,074 ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 30,02,649 ಮಂದಿಗೆ ಕೊರೊನಾ ಬಂದಿದೆ. 29,57,256 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.0.90 ರಷ್ಟಿದ್ದರೇ, ಪಾಸಿಟಿವಿಟಿ ರೇಟ್ ಶೇ.0.25 ರಷ್ಟಿದೆ. 

ರಾಜ್ಯದಲ್ಲಿ ಇಂದು ಒಟ್ಟು 2,40,783 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 87,469 ಸ್ಯಾಂಪಲ್ ಆರ್ಟಿಪಿಸಿಆರ್ 76,430 + 11,039 ರ್ಯಾಪಿಡ್ ಆಂಟಿಜನ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಗಡಿಯ ಎಷ್ಟು ಗ್ರಾಮಗಳು ಕರ್ನಾಟಕಕ್ಕೆ ಸೇರುತ್ತವೆ?