Publish Date: Sun, 19 Dec 2021 (13:21 IST)
Updated Date: Sun, 19 Dec 2021 (13:23 IST)
ಬೆಂಗಳೂರು : ರಾಜ್ಯದಲ್ಲಿ ಜನರಿಗೆ ಶೇ.100ರಷ್ಟು ಮೊದಲ ಡೋಸ್ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ.
2021ರ ಜ.16ರಂದು ಆರಂಭವಾದ ಲಸಿಕಾ ಅಭಿಯಾನವು ಹಲವು ಅಡೆತಡೆಗಳ ನಡುವೆಯೇ ಸಾಗಿದೆ. ಆದಾಗ್ಯೂ, ಮೊದಲ ಡೋಸ್ ಲಸಿಕೆ ನೀಡಿಕೆಯಲ್ಲಿ ಗುರಿ ಮುಟ್ಟುವ ಹಂತಕ್ಕೆ ಬಂದು ತಲುಪಿದೆ.
ಈಗಾಗಲೇ ಶೇ.96ರಷ್ಟು ಮೊದಲ ಡೋಸ್ ನೀಡಲಾಗಿದ್ದು. ಶೇ.71ರಷ್ಟು ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಪ್ರಸ್ತುತ 8.13 ಕೋಟಿ ಲಸಿಕೆ ನೀಡಲಾಗಿದೆ. ಇದರಲ್ಲಿ 4.67 ಕೋಟಿ ಮೊದಲ ಹಾಗೂ 3.45 ಕೋಟಿ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.
ಪ್ರತಿದಿನ ಸರಾಸರಿ 2.45 ಲಕ್ಷ ಲಸಿಕೆ ನೀಡಲಾಗುತ್ತಿದೆ. ಲಸಿಕಾ ಅಭಿಯಾನ ಆರಂಭವಾದ ನಂತರ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಅತಿ ಹೆಚ್ಚು ಲಸಿಕೆ ನೀಡಲಾಗಿದೆ. ಈ ಎರಡೂ ತಿಂಗಳಲ್ಲಿ ಕ್ರಮವಾಗಿ 1.18 ಕೋಟಿ ಮತ್ತು 1.40 ಕೋಟಿ ಲಸಿಕೆ ನೀಡಲಾಗಿದೆ. ಸರಕಾರ ಅಂದುಕೊಂಡಂತೆಯಾಗಿದ್ದರೆ ಈಗಾಗಲೇ ಎರಡೂ ಡೋಸ್ ಶೇ.100ರಷ್ಟು ಮುಗಿಯಬೇಕಿತ್ತು.