Publish Date: Fri, 17 Dec 2021 (15:21 IST)
Updated Date: Fri, 17 Dec 2021 (15:23 IST)
ರಾಜ್ಯದಲ್ಲಿ ಇಂದು ಮತ್ತೆ ಐದು ಮಂದಿಗೆ ಓಮಿಕ್ರಾನ್ ದೃಢಪಟ್ಟಿದೆ.
ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವ ಕೆ ಸುಧಾಕರ್ , ಯುಕೆಯಿಂದ ಹಿಂದಿರುಗಿದ 19 ವರ್ಷದ ವ್ಯಕ್ತಿ, ದೆಹಲಿಯಿಂದ ಬಂದ 36 ವರ್ಷದ ವ್ಯಕ್ತಿ,
ದೆಹಲಿಯಿಂದ ಬಂದಿಳಿದ 70 ವರ್ಷದ ಮಹಿಳೆ, ನೈಜೀರಿಯಾದಿಂದ ಆಗಮಿಸಿದ 52 ವರ್ಷದ ವ್ಯಕ್ತಿ ಹಾಗು ದಕ್ಷಿಣ ಆಫ್ರಿಕಾದಿಂದ ಬಂದ 33 ವರ್ಷದ ವ್ಯಕ್ತಿಗೆ ಓಮಿಕ್ರಾನ್ ದೃಢಪಟ್ಟಿದೆ ಎಂದು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿನ ಪ್ರಮಾಣ 8 ಕ್ಕೆ ಏರಿಕೆಯಾಗಿದೆ.