Select Your Language

Notifications

webdunia
webdunia
webdunia
webdunia

ಅಸೆಮಣೆ ಏರಬೇಕು ಎಂದ ಮಗನಿಗೆ ಮಸಣ ಸೇರಿಸಿದ ತಂದೆ!

ಅಸೆಮಣೆ ಏರಬೇಕು ಎಂದ ಮಗನಿಗೆ ಮಸಣ ಸೇರಿಸಿದ ತಂದೆ!
ಚೆನ್ನೈ , ಭಾನುವಾರ, 19 ಡಿಸೆಂಬರ್ 2021 (13:03 IST)
ಚೆನ್ನೈ : ಮದುವೆ ವಿಚಾರದಲ್ಲಿ ತಂದೆ ಹಾಗೂ ಮಗನ ನಡುವೆ ನಡೆದ ಗಲಾಟೆ ತಾರಕಕ್ಕೇರಿ ಪುತ್ರನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಶಿವಮಣಿ(30) ತಂದೆಯಿಂದಲೇ ಕೊಲೆಯಾದ ಯುವಕ. ಪಾನಮತ್ತರಾಗಿದ್ದ ತಂದೆ-ಮಗ ಮದುವೆ ವಿಚಾರದಲ್ಲಿ ವಾಗ್ವಾದ ನಡೆದಿದೆ. ಇದೇ ಕೊಲೆಗೆ ಕಾರಣ ಎನ್ನಲಾಗಿದೆ.

ಶಿವಮಣಿಗೆ ಇಬ್ಬರು ಸಹೋದರಿಯರಿದ್ದು ಅವರಿಬ್ಬರ ಮದುವೆಯಾಗಿತ್ತು. ಇದೀಗ ತನಗೆ ಮದುವೆ ಮಾಡಿಸುವ ವಿಚಾರದಲ್ಲಿ ಮನೆಯವರು ಅಸಡ್ಡೆ ತೋರುತ್ತಿದ್ದಾರೆ ಎಂದು ಶಿವಮಣಿ ಕ್ಯಾತೆ ತೆಗೆದಿದ್ದಾನೆ. 

ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ಜಗಳ ತಾರಕಕ್ಕೇರಿ ತಂದೆ ತನ್ನ ಮಗನಿಗೆ ಚಾಕುವಿನಿಂದ ಇರಿದುಬಿಟ್ಟಿದ್ದಾರೆ. ಪರಿಣಾಮ ಶಿವಮಣಿ ಸ್ಥಳದಲ್ಲಿಯೇ ಮೃರತಪಟ್ಟಿದ್ದಾನೆ.


Share this Story:

Follow Webdunia kannada

ಮುಂದಿನ ಸುದ್ದಿ

ವರದಕ್ಷಿಣೆ ಕೇಳಿದ ವರನಿಗೆ ಮದುವೆ ಮನೆಯಲ್ಲೇ ಧರ್ಮದೇಟು!