ಚೆನ್ನೈ: ಮದುವೆ ಮಾಡಿಸುವ ವಿಚಾರದಲ್ಲಿ ತಂದೆಯೊಂದಿಗೆ ವಾಗ್ವಾದಕ್ಕಿಳಿದ ಪುತ್ರ ಕೊನೆಗೆ ಹೆಣವಾದ ಧಾರುಣ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಶಿವಮಣಿ ಎಂಬ 30 ವರ್ಷದ ಯುವಕ ತಂದೆಯಿಂದಲೇ ಕೊಲೆಗೀಡಾದ ದುರ್ದೈವಿ. ಪಾನಮತ್ತರಾಗಿದ್ದ ತಂದೆ-ಮಗ ಮದುವೆ ವಿಚಾರದಲ್ಲಿ ವಾಗ್ವಾದ ನಡೆಸಿದ್ದರು.
ಶಿವಮಣಿಗೆ ಇಬ್ಬರು ಸಹೋದರಿಯರಿದ್ದು ಅವರಿಬ್ಬರ ಮದುವೆಯಾಗಿತ್ತು. ಇದೀಗ ತನಗೆ ಮದುವೆ ಮಾಡಿಸುವ ವಿಚಾರದಲ್ಲಿ ಉದಾಸೀನ ತೋರುತ್ತಿದ್ದಾರೆಂದು ಎಂದು ತಂದೆಯೊಡನೆ ಶಿವಮಣಿ ವಾದಕ್ಕಿಳಿದಿದ್ದ. ಇದೇ ತಾರಕಕ್ಕೇರಿ ತಂದೆ ಮಗನಿಗೆ ಅಕಸ್ಮಾತ್ತಾಗಿ ಇರಿದಿದ್ದಾರೆ. ಇದರಿಂದಾಗಿ ಆತ ಸಾವನ್ನಪ್ಪಿದ್ದಾನೆ. ಇದೀಗ ತಂದೆ ತಲೆಮರೆಸಿಕೊಂಡು ಪೊಲೀಸರು ಹುಡುಕಾಟ ನಡೆಸಿದ್ದಾರೆ.