ಬೆಳಗಾವಿ : ಮುಂಬರುವ ಒಂದು ತಿಂಗಳ ಅವಧಿಯಲ್ಲಿ ಬಸವರಾಜ ಬೊಮ್ಮಾಯಿಯವರ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ.
ಸರ್ಕಾರ ಪೊಲೀಸರನ್ನು ಬಿಟ್ಟು ಖಾವಿ ಕುಲಕ್ಕೆ ಅವಮಾನ ಮಾಡಿದೆ ಎಂದು ಕೂಡಲ ಸಂಗಮ ಬಸವ ಧರ್ಮ ಪೀಠದ ಬಸವಪ್ರಕಾಶ ಸ್ವಾಮೀಜಿ ಹಾಗೂ ದಯಾನಂದ ಸ್ವಾಮಿಜಿಗಳು ಸಿಎಂಗೆ ಶಾಪ ಹಾಕಿದ್ದಾರೆ. ಸುವರ್ಣ ಗಾರ್ಡನ್ ಟೆಂಟ್ ಬಳಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಕೈಬಿಡಬೇಕೆಂದು ಬಸವ ದಳ, ಸಸ್ಯಹಾರಿ ಸಂಘಟನೆ ಒಕ್ಕೂಟದಿಂದ ಪ್ರತಿಭಟನೆ ಮಾಡಲಾಯಿತು.
 
 			
 
 			
					
			        							
								
																	ಅನೇಕ ಸ್ವಾಮಿಜಿಗಳು, ಮಾತೆಯರು ಸರ್ಕಾರದ ನಿರ್ಧಾರ ವಿರುದ್ಧ ಪ್ರತಿಭಟಿಸಿದರು. ಬೆಳಗ್ಗೆಯಿಂದ ಸಾಯಂಕಾಲವರೆಗೆ ಟೆಂಟ್ ಬಳಿ ಯಾರೂ ಬರಲಿಲ್ಲ. ನಮ್ಮ ಆಹ್ವಾಲು ಸ್ವೀಕರಿಸಲಿಲ್ಲ ಎಂದು ಆಕ್ರೋಶಕ್ಕೊಳಗಾದರು. ಈ ಸಂದರ್ಭದಲ್ಲಿ ಸುವರ್ಣ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಹೊರಟರು.
									
										
								
																	 
ಈ ವೇಳೆ ಆಕ್ರೋಶಗೊಂಡ ಬಸವಪ್ರಕಾಶ ಸ್ವಾಮೀಜಿ ಹಾಗೂ ದಯಾನಂದ ಸ್ವಾಮೀಜಿ ಸರ್ಕಾರದ ವಿರುದ್ಧ ಹರಿಹಾಯ್ದ ಶಾಪ ಹಾಕಿದರು. ಈ ಅನ್ಯಾಯವನ್ನು ಲಿಂಗಾಯತ ಸಮುದಾಯ ಸಹಿಸಿಕೊಳ್ಳುವುದಿಲ್ಲ ಸ್ವಾಮೀಜಿಗಳನ್ನು, ಲಿಂಗನಿಷ್ಠರನ್ನು ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.
									
											
							                     
							
							
			        							
								
																	ನಾವೆಲ್ಲರೂ ಎಲ್ಲವನ್ನು ಬಿಟ್ಟ ಬಂದ್ಮೇಲೆ ಪೊಲೀಸರು ಅಕ್ಕ, ತಂಗಿ, ತಾಯಿ ಪದ ಬಳಕೆ ಮಾಡಿ ಬೈಯುವುದು ಅಷ್ಟೊಂದು ಸಮಂಜಸವಲ್ಲ ಎಂದು ಸ್ವಾಮಿಜಿಗಳು ಆಕ್ರೋಶ ವ್ಯಕ್ತಪಡಿಸಿದರು.